ಸಾವಿರ ಸಮೀಪಿಸಿದ ಕರೊನಾ!

carona logo
Published on

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 77 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 959ಕ್ಕೆ ಏರಿದೆ. ಮತ್ತೆ ಮೂವರು ಮೃತಪಟ್ಟಿರುವುದನ್ನು ಶನಿವಾರ ಖಚಿತಪಡಿಸಲಾಗಿದೆ. ಇದರಿಂದ, ಕರೊನಾಕ್ಕೆ ಬಲಿಯಾದವರ ಸಂಖ್ಯೆ 32ಕ್ಕೇರಿದೆ.

ಹುಬ್ಬಳ್ಳಿ ತಾಲೂಕಿನಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ತಾಲೂಕುವಾರು ಮಾಹಿತಿ ಇಂತಿದೆ.

ಧಾರವಾಡ ತಾಲೂಕು: ಜು. 6ರಂದು ಸೋಂಕು ತಗುಲಿದ ಧಾರವಾಡ ಯು.ಬಿ.ಹಿಲ್​ನ 80 ವರ್ಷದ ವೃದ್ಧನಿಂದ ಅದೇ ಪ್ರದೇಶದ 32 ವರ್ಷದ ಮಹಿಳೆ, 70 ವರ್ಷದ ವೃದ್ಧ, ಜು. 4ರಂದು ಸೋಂಕಿತನಾದ ಧಾರವಾಡ ಕೃಷಿ ವಿವಿ ಬಳಿಯ 43 ವರ್ಷದ ಪುರುಷನಿಂದ ಧಾರವಾಡ ಕುಮಾರೇಶ್ವರ ನಗರದ 12ರ ಬಾಲಕ, ಜು. 8ರಂದು ಸೋಂಕು ದೃಢಪಟ್ಟ ಗದಗ ಜಿಲ್ಲೆ ಮುಂಡರಗಿ ತಾಲೂಕು ಹಮ್ಮಿಗಿ ಗ್ರಾಮದ 54 ವರ್ಷದ ಮಹಿಳೆಯಿಂದ ಧಾರವಾಡ ಸತ್ತೂರಿನ 27ರ ಯುವಕ, ಹುಬ್ಬಳ್ಳಿ ವಿದ್ಯಾನಗರದ 26 ವರ್ಷದ ಯುವಕ, ಜು. 8ರಂದು ಸೋಂಕಿತ ಧಾರವಾಡ ಶಿವಗಿರಿಯ 36 ವರ್ಷದ ಪುರುಷನಿಂದ ಅದೇ ಪ್ರದೇಶದ 10 ವರ್ಷದ ಬಾಲಕನಿಗೆ ಕರೊನಾ ತಗುಲಿದೆ.

ಗಾಂಧಿನಗರ ಚಿದಂಬರ ನಗರದ 23 ವರ್ಷದ ಯುವಕ, ರಜತಗಿರಿಯ 57 ವರ್ಷದ ಪುರುಷ, ನಿಜಾಮುದ್ದೀನ್ ಕಾಲನಿಯ 22 ವರ್ಷದ ಪುರುಷ, ನೆಹರು ನಗರದ 70 ವರ್ಷದ ವೃದ್ಧ, ಪುರೋಹಿತನಗರದ 23 ವರ್ಷದ ಯುವಕ, ಮದಾರಮಡ್ಡಿಯ 33 ವರ್ಷದ ಮಹಿಳೆ, ಎಸ್​ಡಿಎಂ ಆಸ್ಪತ್ರೆ ಬಳಿಯ 28 ವರ್ಷದ ಯುವತಿ, ಸಪ್ತಾಪುರದ 58 ವರ್ಷದ ಪುರುಷ, ಶೆಟ್ಟರ ಕಾಲನಿಯ 48ರ ಪುರುಷ, ಸೈದಾಪುರದ 29 ವರ್ಷದ ಯುವಕ, ಧಾರವಾಡದ 27 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಅಮ್ಮಿನಭಾವಿ ಗ್ರಾಮದ 45 ವರ್ಷದ ಮಹಿಳೆ, ತಲವಾಯಿ ಗ್ರಾಮದ 18 ವರ್ಷದ ಯುವತಿ, ಹೊಸಯಲ್ಲಾಪುರದ 21 ವರ್ಷದ ಯುವಕ, ನವಲೂರಿನ 46 ವರ್ಷದ ಮಹಿಳೆ ಹಾಗೂ ಹುಬ್ಬಳ್ಳಿಯ 52 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಹುಬ್ಬಳ್ಳಿ ತಾಲೂಕು: ಜು. 7ರಂದು ಬೆಂಗಳೂರಿನಲ್ಲಿ ಸೋಂಕು ದೃಢಪಟ್ಟ 45 ವರ್ಷದ ಮಹಿಳೆಯಿಂದ ಗಣೇಶಪೇಟ ಚಿಟಗುಪ್ಪಿ ಚಾಳದ 11 ವರ್ಷದ ಬಾಲಕ, 14 ವರ್ಷದ ಬಾಲಕ, 20 ವರ್ಷದ ಯುವಕ, 31 ವರ್ಷದ ಮಹಿಳೆ, 45 ವರ್ಷದ ಮಹಿಳೆ, 55 ವರ್ಷದ ಮಹಿಳೆ, ಜೂ. 28ರಂದು ಸೋಂಕು ತಗುಲಿದ್ದ ಧಾರವಾಡ ಮಿಚಗನ್ ಕಾಂಪೌಂಡ್ ಲೋಬೊ ಅಪಾರ್ಟ್​ವೆುಂಟ್​ನ 57 ವರ್ಷದ ಮಹಿಳೆಯಿಂದ ಹುಬ್ಬಳ್ಳಿ ದೇಶಪಾಂಡೆ ನಗರದ 29 ವರ್ಷದ ಮಹಿಳೆ, ಜು. 7ರಂದು ಸೋಂಕಿನಿಂದ ಮೃತಪಟ್ಟ ಹುಬ್ಬಳ್ಳಿ ಸಿದ್ಧಗಂಗಾ ಕಾಲನಿಯ 85 ವರ್ಷದ ವೃದ್ಧನಿಂದ ಅದೇ ಪ್ರದೇಶದ 41 ವರ್ಷದ ಪುರುಷ, ಜು. 1ರಂದು ಸೋಂಕು ದೃಢಪಟ್ಟ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿಯ 27 ವರ್ಷದ ಯುವಕನಿಂದ ಹುಬ್ಬಳ್ಳಿ ಬಸವೇಶ್ವರ ನಗರದ 29 ವರ್ಷದ ಮಹಿಳೆ, ಜು. 2ರಂದು ಸೋಂಕು ತಗುಲಿದ ಹುಬ್ಬಳ್ಳಿ ಗುರುಸಿದ್ಧೇಶ್ವರ ನಗರದ 38 ವರ್ಷದ ಪುರುಷನಿಂದ ಅದೇ ಪ್ರದೇಶದ 37 ವರ್ಷದ ಮಹಿಳೆ, 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಕೆಮ್ಮು, ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪ್ರಶಾಂತ ನಗರದ 32 ವರ್ಷದ ಪುರುಷ, ಮಹಾಲಕ್ಷ್ಮೀ ಕಾಲನಿಯ 38 ವರ್ಷದ ಪುರುಷ, ಸಿದ್ಧೇಶ್ವರ ಪಾರ್ಕ್​ನ 40 ವರ್ಷದ ಪುರುಷ, ಕೌಲ್​ಪೇಟೆಯ 85 ವರ್ಷದ ವೃದ್ಧ, ಅಕ್ಷಯ ಕಾಲನಿ ತೋಳನಕೆರೆ ಬಳಿಯ 48 ವರ್ಷದ ಪುರುಷ, 13 ವರ್ಷದ ಬಾಲಕ, 15 ವರ್ಷದ ಬಾಲಕ, ಭಂಡಿವಾಡದ 64 ವರ್ಷದ ವೃದ್ಧ, ರಾಮಲಿಂಗ ನಗರದ 17 ವರ್ಷದ ಬಾಲಕ, ದೇಶಪಾಂಡೆ ನಗರದ 78 ವರ್ಷದ ವೃದ್ಧೆ, ತಬೀಬ್ ಲ್ಯಾಂಡ್ ಬಾರಕೇರ ಗಲ್ಲಿಯ 55 ವರ್ಷದ ಮಹಿಳೆ, ಅಂಬೇಡ್ಕರ್ ನಗರದ 81 ವರ್ಷದ ವೃದ್ಧೆ, ಗೋಕುಲ ರಸ್ತೆಯ 27 ವರ್ಷದ ಪುರುಷ, ಕಿಮ್್ಸ ಆವರಣದ 23 ವರ್ಷದ ಯುವತಿ, ಶಕ್ತಿ ಕಾಲನಿಯ 40 ವರ್ಷದ ಪುರುಷ, ವಿಜಯ ನಗರದ 65 ವರ್ಷದ ಮಹಿಳೆ, ಹುಬ್ಬಳ್ಳಿಯ 30 ವರ್ಷದ ಮಹಿಳೆ, ಗುರುಸಿದ್ಧೇಶ್ವರ ನಗರದ 60 ವರ್ಷದ ವೃದ್ಧ, ಹೊಸೂರಿನ 33 ವರ್ಷದ ಪುರುಷ, ವಿಜಯ ನಗರ ಗೋಲ್ಡನ್ ಪಾರ್ಕ್​ನ 27 ವರ್ಷದ ಯುವಕ, ವೀರಾಪುರದ 52 ವರ್ಷದ ಪುರುಷ, 60 ವರ್ಷದ ಮಹಿಳೆ, ಹುಬ್ಬಳ್ಳಿಯ 58 ವರ್ಷದ ಪುರುಷ, ಹಳೇ ಹುಬ್ಬಳ್ಳಿ ಬ್ಯಾಂಕರ್ಸ್ ಕಾಲನಿಯ 63 ವರ್ಷದ ವೃದ್ಧ, ದೀನಬಂಧು ಕಾಲನಿಯ 34 ವರ್ಷದ ಪುರುಷ, ಪಾಟೀಲ ಗಲ್ಲಿಯ 72 ವರ್ಷದ ವೃದ್ಧ, ಹುಬ್ಬಳ್ಳಿ ಗೋಡ್ಕೆ ಪ್ಲಾಟ್​ನ 48 ವರ್ಷದ ಪುರುಷ, ಕಿಮ್್ಸ ಆವರಣದ 26 ವರ್ಷದ ಯುವಕ, ಹುಬ್ಬಳ್ಳಿಯ 17 ವರ್ಷದ ಬಾಲಕ, ಹುಬ್ಬಳ್ಳಿ ಗುರುನಾಥ ನಗರದ 58 ವರ್ಷದ ಪುರುಷ, ದೇಶಪಾಂಡೆ ನಗರದ 62 ವರ್ಷದ ಪುರುಷ, ಇಸ್ಲಾಂಪುರ ಮುಖ್ಯ ರಸ್ತೆಯ 24 ವರ್ಷದ ಯುವಕ, ಶಕ್ತಿ ನಗರದ 50 ವರ್ಷದ ಪುರುಷ, ಶಿರಗುಪ್ಪಿ ಗ್ರಾಮದ 68 ವರ್ಷದ ಪುರುಷನಿಗೆ, ಬೆಂಗಳೂರಿನಿಂದ ಆಗಮಿಸಿದ ಬೆಂಗೇರಿಯ 40 ವರ್ಷದ ಪುರುಷ, ಬೆಳಗಾವಿ ಜಿಲ್ಲೆ ಪ್ರಯಾಣದ ಹಿನ್ನೆಲೆ ಹೊಂದಿರುವ ಗೋಕುಲ ರಸ್ತೆಯ 23 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕುಂದಗೋಳ: ಪಟ್ಟಣದ ಸಾಲಿಯಾರ ಪ್ಲಾಟ್​ನ 52 ವರ್ಷದ ಪುರುಷ, ಇಂಗಳಗಿ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ನವಲಗುಂದ: ತಾಲೂಕಿನ ಕಾಲವಾಡ ಗ್ರಾಮದ 65 ವರ್ಷದ ವೃದ್ಧೆಯಲ್ಲಿ ಕರೊನಾ ವೈರಸ್ ಕಂಡುಬಂದಿದೆ.

ಅನ್ಯ ಜಿಲ್ಲೆಯವರು: ಕೆಮ್ಮು, ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿಯ 50 ವರ್ಷದ ಮಹಿಳೆ, ಸದಾಶಿವ ನಗರದ 61 ವರ್ಷದ ವೃದ್ಧ ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ನೀರಲಗಿ ಗ್ರಾಮದ 19 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ಕಿಮ್್ಸ ಮತ್ತಿಷ್ಟು ಸಿಬ್ಬಂದಿಗೆ ಕಾಟ

ಹುಬ್ಬಳ್ಳಿ: ಇಲ್ಲಿನ ಕಿಮ್ಸ್​ನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ, ಗೃಹ ವೈದ್ಯ ಹಾಗೂ ಡಯಟೇಷನಿಸ್ಟ್​ಗೆ ಕರೊನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಅಡುಗೆ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಆಹಾರವನ್ನು ವಿಶೇಷ ಪರೀಕ್ಷೆಗೆ ಒಳಪಡಿಸಿ, ಶುದ್ಧತೆ ಖಚಿತಪಡಿಸಿಕೊಂಡು ವಿತರಿಸಲಾಗಿದೆ.

ಪಿಪಿಇ ಕಿಟ್ ಕೊಡಿ: ಇತರೆ ವಾರ್ಡ್​ಗಳಲ್ಲಿ ಸೋಂಕಿತ ವ್ಯಕ್ತಿಗಳು ಪತ್ತೆಯಾಗುತ್ತಿದ್ದು, ಅಲ್ಲಿನ ಕೆಲ ಸಿಬ್ಬಂದಿಗೆ ಸುರಕ್ಷತಾ ಪರಿಕರಗಳಿಲ್ಲದೇ ಆತಂಕ ಉಂಟಾಗುತ್ತಿದೆ. ಆದ್ದರಿದ ಕೋವಿಡ್​ಗೆ ಹೊರತಾದ ವಾರ್ಡ್​ಗಳಲ್ಲಿ ಕೆಲಸ ಮಾಡುವವರಿಗೂ ಪಿಪಿಇ ಕಿಟ್ ಕೊಡಬೇಕು ಎಂಬ ಒತ್ತಾಯ ಸಿಬ್ಬಂದಿ ವರ್ಗದಿಂದ ಕೇಳಬಂದಿದೆ.

ಕೋವಿಡ್​ನಿಂದ ಮೂವರ ಸಾವು

ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶನಿವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಧಾರವಾಡ ಚರಂತಿಮಠ ಗಾರ್ಡನ್​ನ 73 ವರ್ಷದ ವೃದ್ಧ ಜು. 6ರಂದು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಾಗಿದ್ದನು. 7ರಂದು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕೇಶ್ವಾಪುರ ಸುಭಾಸನಗರದ 54 ವರ್ಷದ ಪುರುಷ ಜು. 8ರಂದು ಚಿಕಿತ್ಸೆಗೆ ದಾಖಲಾಗಿದ್ದರು. 9ರಂದು ಮೃತಪಟ್ಟಿದ್ದಾರೆ. ಧಾರವಾಡ ಗಾಂಧಿನಗರದ 58 ವರ್ಷದ ಪುರುಷ ಚಿಕಿತ್ಸೆಗಾಗಿ ಜು. 8ರಂದು ದಾಖಲಾಗಿದ್ದರು. 9ರಂದು ಮರಣ ಹೊಂದಿದ್ದಾರೆ. ಪಾರ್ಥಿವ ಶರೀರಗಳನ್ನು ನಿಯಮಾನುಸಾರ ಪ್ಯಾಕಿಂಗ್ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 32 ಜನ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಆಯುರ್ವೆದ ಕಾಲೇಜ್​ನಿಂದ 8 ಜನ ಬಿಡುಗಡೆ

ಹುಬ್ಬಳ್ಳಿ: ನಗರದ ಹೆಗ್ಗೇರಿ ಆಯುರ್ವೆದ ಆಸ್ಪತ್ರೆಯ ಕೋವಿಡ್ ನಿಗಾ ಘಟಕದಿಂದ ರೋಗ ಲಕ್ಷಣವಿರದ ಸೋಂಕು ಮುಕ್ತ 8 ಜನರನ್ನು ಶನಿವಾರ ಬಿಡುಗಡೆ ಮಾಡಲಾಯಿತು. ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಮಾತನಾಡಿ, ಪ್ರತಿ ದಿನ ಬಿಸಿನೀರು, ಕಷಾಯ ಸೇವನೆ, ಬಿಸಿ ಪದಾರ್ಥವನ್ನು ತಿನ್ನಬೇಕು. 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸೋಂಕು ಮುಕ್ತರಿಗೆ ಸಲಹೆ ನೀಡಿದರು. ಘಟಕದ ಮುಖ್ಯ ವ್ಯವಸ್ಥಾಪಕ ಡಾ.ಜೆ.ಆರ್. ಜೋಶಿ, ಡಾ. ಉಷಾ ಹೊಸಮನಿ, ಡಾ.ಎಸ್.ಜಿ. ಚವ್ಹಾಣ, ಡಾ. ಸಿ. ತ್ಯಾಗರಾಜ, ಡಾ.ಕೆ.ಎಂ. ಜಗ್ಗಲ್, ಡಾ. ಪ್ರಕಾಶ ರಾಠೋಡ, ಡಾ. ಪದ್ಮಾವತಿ ಕುಲಕರ್ಣಿ, ದಾದಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net