ಸಾವಿರ ಬೀಜದುಂಡೆ ತಯಾರಿಸಿದ ಮಕ್ಕಳು

IMG-20250408-WA0396
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಕೊಳಗುಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬೇಸಿಗೆ ಶಿಬಿರದಲ್ಲಿ 1000 ಬೀಜದುಂಡೆ ತಯಾರಿಸಿ ಮಾದನಹಳ್ಳಿ ಸಮೀಪವಿರುವ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹಾಕಿದರು.

ಪರೀಕ್ಷೆಯ ನಂತರ ಶಾಲೆಯಲ್ಲಿ ಹಮ್ಮಿಕೊಂಡಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಅನೇಕ ರಚನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಥೆ, ಕವನ ಬರೆಯುವುದು, ಯೋಗ, ಪ್ರಾಣಾಯಾಮ, ಚಿತ್ರಕಲೆ, ಹಾಡುಗಾರಿಕೆ, ಕಂಪ್ಯೂಟರ್ ಕಲಿಕೆ, ವಿಜ್ಞಾನ ಮಾದರಿಗಳ ತಯಾರಿಕೆ ಸೇರಿದಂತೆ ಚಟುವಟಿಕೆಗಳನ್ನು ಕಲಿಯುತ್ತಿದ್ದಾರೆ.

80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲಸು, ಬೇವು, ಹುಣಸೆ, ಹೊಂಗೆ, ನೇರಳೆ ಬೀಜಗಳನ್ನು ತಂದು ಮಣ್ಣು ಸಗಣಿ ಮಿಶ್ರಣ ಮಾಡಿ ಮಣ್ಣಿನ ಉಂಡೆಗಳನ್ನು ತಯಾರಿಸಿ ಅದರೊಳಗೆ ಬೀಜವಿಟ್ಟು ಮುಚ್ಚಿ ಬೀಜದುಂಡೆಗಳನ್ನು ತಯಾರಿಸಿ ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿಟಿದ್ದರು. ಮಾದನಹಳ್ಳಿ ಸಮೀಪವಿರುವ ಬೆಟ್ಟದ ಸುತ್ತಲ ಪ್ರದೇಶದಲ್ಲಿ ಬೀಜದುಂಡೆಗಳನ್ನು ಹಾಕಿದರು.

ಕೊಳಗುಂದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪ್ರಸನ್ನಕುಮಾರ್ ಸುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net