

ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ನಾಗಾಲೋಟ ಮುಂದುವರಿದಿದ್ದು, ಭಾನುವಾರ 61 ಜನರಿಗೆ ಸೋಂಕು ದೃಢಪಟ್ಟಿದೆ.
ಒಟ್ಟು ಸೋಂಕಿತರ ಸಂಖ್ಯೆ 1,004ಕ್ಕೇರಿದ್ದು, 628 ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ 354 ಜನರು ಗುಣವಾಗಿ ಬಿಡುಗಡೆಗೊಂಡಿದ್ದಾರೆ.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಣೇಶ ದೇವಸ್ಥಾನದ ಹತ್ತಿರ ಮಸಾರಿ, ಶರಣಬಸವೇಶ್ವರ ನಗರ, ಅಮರೇಶ್ವರ ನಗರ, ಕೆಎಸ್ಆರ್ಟಿಸಿ ಕಾಲನಿ, ಕನ್ಯಾಳ ಅಗಸಿ, ಎಸ್.ಎಂ.ಕೆ. ನಗರ, ಹುಡ್ಕೋ ಕಾಲನಿ, ಮೇಲ್ಮಠ, ಒಕ್ಕಲಗೇರಿ ಓಣಿ, ಕಿಲ್ಲಾ ಓಣಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ.
ಗದಗ ತಾಲೂಕಿನ ಬಿಂಕದಕಟ್ಟಿ, ಹೊಂಬಳ, ನೀಲಗುಂದ, ಮಲ್ಲಾಪೂರ, ಚಿಕ್ಕ ಹಂದಿಗೋಳ. ಮುಂಡರಗಿ ಪಟ್ಟಣದ ಜಾಗೃತ ವೃತ್ತ, ಮಸೂತಿ ಓಣಿ. ಮುಂಡರಗಿ ತಾಲೂಕಿನ ಹಳ್ಳಿಗುಡಿ. ರೋಣ ಪಟ್ಟಣದ ತಳವಾರ ಓಣಿ. ರೋಣ ತಾಲೂಕಿನ ಹಿರೇಹಾಳ, ನಿಡಗುಂದಿ, ಹೊಳೆಆಲೂರ, ಅಬ್ಬಿಗೇರಿ. ಲಕ್ಷ್ಮೇಶ್ವರದ ಹಳ್ಳದಕೇರಿ, ಪೇಟೆಬನ, ಗೌಡರ ಓಣಿ. ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ. ನರಗುಂದ ಪಟ್ಟಣದ ಹುಣಸಿಕಟ್ಟಿ ಪ್ಲಾಟ್, ನೀರಾವರಿ ಪ್ಲಾಟ್, ಗಾಡಿ ಓಣಿ, ಅಂಬೇಡ್ಕರ್ ನಗರ. ನರಗುಂದ ತಾಲೂಕಿನ ಹುಣಸಿಕಟ್ಟಿ, ಹೊಸೂರ, ಕೊಣ್ಣೂರ, ಶಿರೋಳ, ಸೋಮಾಪುರ.
ಧಾರವಾಡ ಜಿಲ್ಲೆಯವರು: ಹುಬ್ಬಳ್ಳಿಯ ಮುಂಜುನಾಥ ನಗರ, ಸುಭಾಷ ನಗರ, ಗುಡಿಹಾಳ, ವಿದ್ಯಾನಗರ ಹಾಗೂ ಅಣ್ಣಿಗೇರಿ ಪಟ್ಟಣದ ಒಬ್ಬರಿಗೆ ಸೋಂಕು ತಗುಲಿದೆ.
ಚಿಕಿತ್ಸೆ ಫಲಿಸದೇ ಇಬ್ಬರು ವೃದ್ಧರು ಸಾವು: ಲಕ್ಷೆ್ಮೕಶ್ವರ ಪಟ್ಟಣದ ಸೋಮೇಶ್ವರ ನಗರ ನಿವಾಸಿ 78 ವರ್ಷದ ವೃದ್ಧೆ ಶನಿವಾರ ಮೃತಪಟ್ಟಿದ್ದಾರೆ. ಜುಲೈ 19ರಂದು ಕೋವಿಡ್- 19 ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವೃದ್ಧೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಅವರ ಗಂಟಲ ದ್ರವ ಮಾದರಿ ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಜುಲೈ 25ರಂದು ನ್ಯೂಮೊನಿಯಾ ಹಾಗೂ ಹೃದಯಾಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮೃತಪಟ್ಟಿದ್ದಾರೆ. ಗದಗ ಬ್ಯಾಂಕರ್ಸ್ ಕಾಲನಿ ನಿವಾಸಿ 64 ವರ್ಷದ ಪುರುಷ ಶನಿವಾರ ಮೃತಪಟ್ಟಿದ್ದಾರೆ. ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 24ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ನ್ಯೂಮೊನಿಯಾ, ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್- 19 ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.