

ಚಿತ್ರದುರ್ಗ:ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಾವಿರ ಕವಿಗಳ ಕವಿಗೋಷ್ಠಿಯಲ್ಲಿ ಚಿತ್ರದುರ್ಗಎಸ್‌ಆರ್‌ಎಸ್ ಪದವಿ ಕಾಲೇಜಿನ 33 ವಿದ್ಯಾರ್ಥಿ ಗಳು ಭಾಗವಹಿಸಿ ಫಲಕ ಮತ್ತು ಪ್ರಮಾಣ ಪತ್ರ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಂದಿರುವ ಈ ಗೌರವಕ್ಕೆ ಎಸ್‌ಆರ್ ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ಟಿ.ಎಸ್. ರವಿ ಹರ್ಷವ್ಯಕ್ತಪಡಿಸಿದ್ದಾರೆ. ಪ್ರಾಚಾರ್ಯ ಪ್ರೊ.ಜಿ.ಪಿ. ನಂದನ್, ಕನ್ನಡ ಸಹಾಯಕ ಪ್ರಾಧ್ಯಾಪಕ ದೇವೇಂದ್ರಪ್ಪ ಕುಂಚಿಗನಾಳ್, ಹಿರಿಯ ಆಂಗ್ಲ ಪ್ರಾಧ್ಯಾಪಕ ಡಿ.ಎಚ್. ನಟರಾಜ, ಡಾ. ಈರಣ್ಣ, ಸಾಧನಾ, ಶಿಲ್ಪಾ, ಶಿವಕುಮಾರ್ ಇದ್ದರು.
---