ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

CHANDRU SHEKAR
ಚಂದ್ರಶೇಖರ್
Published on

ಹನೂರು: ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಮಗನ ಎರಡು ಕಣ್ಣುಗಳನ್ನು ಆತನ ಇಚ್ಛೆಯಂತೆ ತಂದೆ, ದಾನ ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ನಂಜುಂಡಸ್ವಾಮಿ ಅವರ ಪುತ್ರ ಚಂದ್ರಶೇಖರ್ (21) ಮೃತಪಟ್ಟವರು.
ಚಂದ್ರಶೇಖರ್ ಮೈಸೂರಿನಲ್ಲಿ ಇಂಜಿನಿಯರಿಗ್ ಶಿಕ್ಷಣ ಮುಗಿಸಿದ್ದು, ಚಾಮರಾಜನಗರದಲ್ಲಿ ವಾಸವಿದ್ದರು.

ಮಂಗಳವಾರ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಮೈಸೂರಿಗೆ ತೆರಳಿ ಹಿಂತಿರುಗುತ್ತಿದ್ದರು. ಈ ವೇಳೆ ಮೈಸೂರು ನಗರದಲ್ಲಿ ಅಪಘಾತವಾಗಿ ತೀವ್ರ ಗಾಯಗೊಂಡಿದ್ದರು. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಚಂದ್ರಶೇಖರ್ ಮೃತಪಟ್ಟರು.

ಮಗನ ಇಚ್ಛೆಯಂತೆ ಬೆಂಗಳೂರಿನ ಲಯನ್ಸ್ ಇಂಟರ್‌ನ್ಯಾಷನಲ್ ಕಣ್ಣಿನ ಘಟಕಕ್ಕೆ ಎರಡು ಕಣ್ಣುಗಳನ್ನು ದಾನಮಾಡಲಾಗಿದೆ. ಮೃತನ ಅಂತ್ಯಕ್ರಿಯೆ ಚಿಕ್ಕರಂಗಶೆಟ್ಟಿ ದೊಡ್ಡಿಯಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net