ಸಾವಿನಲ್ಲೂ ಒಂದಾದ ದಂಪತಿ

CTD ---00003
Published on

ಚಿತ್ರದುರ್ಗ: ಪತಿ ಸಾವಿನ ಸುದ್ದಿ ಕೇಳಿದ ತಕ್ಷಣವೇ ಪತ್ನಿ ಕೂಡ ಇಹಲೋಕ ತ್ಯಜಿಸಿದ ಹೃದಯ ವಿದ್ರಾವಕ ಘಟನೆ ನಗರದ ಸಂಗಮೇಶ್ವರ ಬಡಾವಣೆ ಯಲ್ಲಿ ಸೋಮವಾರ ನಡೆದಿದೆ.ನಗರದ ಸಂಗಮೇಶ್ವರ ಬಡಾವಣೆ ನಿವಾಸಿ,ಎಸ್‌ಜೆಎಂ ವಿದ್ಯಾಪೀಠದ ನಿವೃತ್ತ ಮುಖ್ಯಗ್ರಂಥಪಾಲಕ ಓಂಕಾರ ಮೂರ್ತಿ(67)ಹಾಗೂ ಪತ್ನಿ ದಾಕ್ಷಾಯಣಮ್ಮ(59) ಅವರು ನಿಧನ ಹೊಂದಿದ ದಂಪತಿ.

ಓಂಕಾರಮೂರ್ತಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದರಿಂದ ನಗರದ ಬಸವೇಶ್ವರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಪತಿ ಕೈ ಹಿಡಿದೇ ಪತ್ನಿ ಮೃತಪಟ್ಟಿದ್ದಾರೆ. ಪತಿ ಅನಾರೋಗ್ಯಕ್ಕೆ ಒಳಗಾಗಿದ್ದ ವೇಳೇ ಅವರು ಇಲ್ಲದೆ ಒಂದು ಕ್ಷಣವೂ ಇರಲಾರೆ ಎಂದು ತಾಯಿ ಹೇಳಿದ್ದನ್ನು ನೆನೆದು ಅವರ ಪುತ್ರಿಯರು ದುಃಖಿತರಾಗಿದ್ದರು. ನಗರದ ನಾನಾ ಗಣ್ಯರು ಓಂಕಾರಮೂರ್ತಿ ನಿವಾಸಕ್ಕೆ ಧಾವಿಸಿ, ನೊಂದ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net