ಸಾವಿತ್ರಿಬಾಯಿಫುಲೆ ಅಕ್ಷರಕ್ರಾಂತಿ ವಿಶೇಷ: ವೈ.ಎ.ನಾರಾಯಣಸ್ವಾಮಿ

IMG-20220731-WA0036.jpg
Published on

ದಾವಣಗೆರೆ :ವೈಜ್ಞಾನಿಕ ಚಿಂತನೆಗೆ ಅವಕಾಶವೇ ಇಲ್ಲದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮಾಡಿದ ಅಕ್ಷರ ಕ್ರಾಂತಿ ವಿಶೇಷವಾದುದು ಎಂದು ಮೇಲ್ಮನೆ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದಿಂದ ಗೀತಾಂಜಲಿ ಚಿತ್ರಮಂದಿರದಲ್ಲಿ ಭಾನುವಾರ, ಶಿಕ್ಷಕರು- ಶಾಲಾ ಮಕ್ಕಳಿಗೆ ಆಯೋಜಿಸಿದ್ದ, ಸಾವಿತ್ರಿಬಾಯಿ ಫುಲೆ ಚಿತ್ರದ ವಿಶೇಷ ಪ್ರದರ್ಶನ ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜ ಬದಲಾವಣೆಗಾಗಿ ಅಕ್ಷರಾಭ್ಯಾಸದ ಮೂಲಮಂತ್ರದ ಯೋಚನೆಯೊಂದಿಗೆ ಮೊದಲ ಬಾರಿಗೆ ಅಕ್ಷರ ಪರಂಪರೆಯನ್ನು ನೀಡಿದ ಸಾವಿತ್ರಿಬಾಯಿ ಫುಲೆ ಅವರ ಜೀವನಾಧರಿತ ಚಿತ್ರವನ್ನು ಯುವ ಪೀಳಿಗೆ ವೀಕ್ಷಿಸುವ ಜತೆಗೆ ಸಂದೇಶ ನೀಡಬೇಕಿದೆ ಎಂದು ಆಶಿಸಿದರು. ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ಕಾರ್ಯಕ್ರಮದಲ್ಲಿ ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಬಿಇಒಗಳಾದ ನಿರಂಜನಮೂರ್ತಿ, ಟಿ. ಅಂಬಣ್ಣ, ಪುಷ್ಪಲತಾ, ಮುಬಾರಕ್, ದಾರುಕೇಶಯ್ಯ, ಹಾಲೇಶ್, ರೇವಣಸಿದ್ದಯ್ಯ, ಕಲ್ಪನಾ ರವೀಂದ್ರನಾಥ್ ಇದ್ದರು. --
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net