ಸಾವಿತ್ರಿಬಾಯಿ ರಾಜ್ಯ ಪ್ರಶಸ್ತಿ ಪ್ರದಾನ

10Rayabag1
ರಾಯಬಾಗ ಪಟ್ಟಣದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪುರಸತರನ್ನು ಸತ್ಕರಿಸಲಾಯಿತು. ಡಾ. ಬಾಬುರಾವ ನಡೋಣಿ, ಆಶಾರಾಣಿ ನಡೋಣಿ, ಪ್ರೊ. ಶಿವಾನಂದ ಬೆಳಕೂಡ, ಡಾ.ಜಯವೀರ ಎ.ಕೆ. ಇತರರಿದ್ದರು.
Published on

ರಾಯಬಾಗ: ಪಟ್ಟಣದಲ್ಲಿ ಶನಿವಾರ ಡಾ. ಬಾಬುರಾವ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಾಹಿತ್ಯ ಪೋಷಕರಾದ ಪುಷ್ಪಾ ಜ್ಯೋತಿ ಹೊಸೂರ ಹಾಗೂ ಕವಯತ್ರಿ ಡಾ.ರತ್ನಾ ಬಾಳಪ್ಪನವರಗೆ ಸಾವಿತ್ರಿಬಾಯಿ ುಲೆ ರಾಜ್ಯ ಪ್ರಶಸ್ತಿ ಮತ್ತು ವೆದ್ಯಕಿಯ ೇತ್ರದಲ್ಲಿ ಸಾಧನೆ ಮಾಡಿದ ಡಾ. ಶೆಲಜಾ ಬೆಳಗಾಂವಕರ, ಡಾ. ಗಾಯತ್ರಿ ಬಾನೆ, ಡಾ.ಸುರೇಖಾ ಸಂಗಟಿ, ಡಾ. ಮನೀಷಾ ರಾವಳಕರ, ಡಾ. ಆರತಿ ಚಿನಕೋಟಿ, ಡಾ. ವಿಜಯಾ ಡಾಂಗೆ, ಡಾ. ಗೀತಾ ನಾಯಿಕ ಅವರಿಗೆ ಮದರ್​ ತೆರೆಸಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯ ಪ್ರಶಸ್ತಿ ಪುರಸತ ಉಪನ್ಯಾಸಕ ಪ್ರೊ. ಅಣ್ಣಪ್ಪ ಕುಂಬಾರ ಅವರನ್ನು ಸತ್ಕರಿಸಲಾಯಿತು. ಪ್ರತಿಷ್ಠಾನದ ರೂವಾರಿ ಡಾ. ಬಾಬುರಾವ ನಡೋಣಿ, ಚಿತ್ರಕಲಾವಿದೆ, ಶಿಕಿ ಆಶಾರಾಣಿ ನಡೋಣಿ, ಹಿರಿಯ ಸಾಹಿತಿ ಪ್ರೊ ಶಿವಾನಂದ ಬೆಳಕೂಡ, ಡಾ.ಜಯವೀರ ಎ.ಕೆ., ಪಪಂ ಅಧ್ಯ ಅಶೋಕ ಅಂಗಡಿ, ಪ್ರತಿಭಾ ನಡೋಣಿ, ಚನ್ನಮ್ಮ ತಳವಾರ, ಡಿ.ಎಚ್​. ಯಲ್ಲಟ್ಟಿ, ಡಾ. ಬಿ.ಎಂ.ಪಾಟೀಲ, ಸಾಗರ ಝೆಂಡೆನ್ನವರ, ಎಸ್​. ಎಸ್​. ಕಾಂಬಳೆ, ಶ್ರೀಶೆಲ ಶಿರೂರ, ರೇಖಾ ಗುಪ್ತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net