

ಭಾಲ್ಕಿ: ಮಹಿಳೆಯರ ಸ್ವಾತಂತ್ರಕ್ಕಾಗಿ ಹಗಲಿರುಳು ಶ್ರಮಿಸಿದ ದೇಶಕಂಡ ಅಪ್ರತಿಮ ಮಹಿಳೆ ಸಾವಿತ್ರಿಬಾಯಿ ಫುಲೆಯವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ನಿದೇರ್ಶಕಿ ಡಾ.ಗೀತಾ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಿಕೆಐಟಿ ಕಾಲೇಜಿನ ಸಭಾಂಗಣದಲ್ಲಿ ಸಾವಿತ್ರಿಬಾಯಿಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಶನಿವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆಯವರ ೧೯೪ನೇ ಜಯಂತಿ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆಯವರ ನಾಯಕತ್ವದಲ್ಲಿ ದೇಶದ ಮಹಿಳೆಯರಿಗೆ ಸ್ವಾತಂತ್ರ ಸಿಕ್ಕಿದೆ. ಇಂತಹ ಮಾತೆಯ ಆದರ್ಶಗಳು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡಾಗ ಇವರ ಜಯಂತಿ ಮಹೋತ್ಸವಕ್ಕೆ ಬೆಲೆ ಬರುತ್ತದೆ ಎಂದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯವಹಿಸಿ ಮಾತನಾಡಿದರು.
ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಫೆಡರೇಷನ್ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷೆ ಡಾ. ಲತಾ ಎಸ್ ಮುಳ್ಳೂರ ದಿನದರ್ಶಿಕೆ ಬಿಡುಗಡೆ ಮಾಡಿದರು.
ರಾಷ್ಟ್ರೀಯ ಕಾರ್ಯದರ್ಶಿ ಡಾ.ಸಾರಿಕಾ ಎಸ್.ಗಂಗಾ ಅಧ್ಯಕ್ಷತೆ, ಕರ್ನಾಟಕ ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷ ಕೀರ್ತಿಲತಾ ಹೊಸಾಳೆ ನೇತೃತ್ವ ವಹಿಸಿದ್ದರು.
ಡಾ.ಶೈಲಜಾ ತಳವಾಡೆ, ಶಾಂತಾಬಾಯಿ ಬಿರಾದಾರ ಮಾತನಾಡಿದರು. ಸಾಹಿತಿ ಪಾರ್ವತಿ ಸೋನಾರೆ ವಿಶೇಷ ಉಪನ್ಯಾಸ ಮಂಡಿಸಿದರು.
ಕರಾಸನೌ ಸಂಘದ ಜಿಲ್ಲಾದ್ಯಕ್ಷ ಸೋಮಶೇಖರ ಚಿದ್ರಿ, ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ, ಡಾ.ಸಂಜೀವಕುಮರ ಅತಿವಾಳೆ, ಪಾಂಡುರಂಗ ಬೆಲ್ದಾರ, ವೈಜಿನಾಥ ಸಾಗರ, ರವೀಂದ್ರ ರೆಡ್ಡಿ, ಸೂರ್ಯಕಾಂತ ಸುಂಟೆ, ದತ್ತು ಕಾಟಕರ, ಮನೋಹರ ಹೊಳಕರ, ಮಲ್ಲಿನಾಥ ಸಜ್ಜನ, ರೋಹಿದಾಸ ರಾಠೋಡ, ನಾಗಭೂಷಣ ಮಾಮಡಿ, ಉತ್ತಮ ಸಿಂದೆ, ಡಾ.ಉದಯಕುಮಾರ ಕಲ್ಯಾಣೆ ಇತರರಿದ್ದರು.
ಸಾಧಕರಿಗೆ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಸಾರಿಕಾ.ಎಸ್.ಗಂಗಾ ಸ್ವಾಗತಿಸಿದರು. ಡಾ.ಭುವನೇಶ್ವರಿ ನಿರೂಪಣೆ ಮಾಡಿದರು. ನಿರ್ಮಲಾ ಜಮಾದಾರ ವಂದಿಸಿದರು.