ಸಾವಳಗಿ ಗ್ರಾಮದಲ್ಲಿ ಜಾಗೃತಿ ಜಾಥಾ

0810Klb10
Published on

ಕಲಬುರಗಿ: ಸಾವಳಗಿ (ಬಿ) ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ `ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ' ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು.

ನರೇಗಾ ಅಡಿ ಕೃಷಿ ಹೊಂಡ, ಕ್ಷೇತ್ರ ಬದು ನಿರ್ಮಾಣ, ರಸ್ತೆ ಬದಿ ಸಸಿ ನೆಡುವುದು, ಕೆರೆ ಹೂಳೆತ್ತುವುದು ಹಾಗೂ ದನದ ಕೊಟ್ಟಿಗೆ, ಕುರಿಶೆಡ್, ಈರುಳ್ಳಿ ಘಟಕ, ಎರೆಹುಳು ಘಟಕ, ನಮ್ಮ ಹೊಲ ನಮ್ಮ ದಾರಿ ಸೇರಿ ವಿವಿಧ ಕಾಮಗಾರಿಗಳ ಕುರಿತು ಮನೆ ಮನೆಗೆ ಭೇಟಿ ನೀಡಿ, ಜಾಗೃತಿ ಮೂಡಿಸಲಾಯಿತು.

ಗ್ರಾಪಂ ಅಧ್ಯಕ್ಷ ರಮೇಶ ಕನಗೊಂಡ, ಉಪಾಧ್ಯಕ್ಷ ಅರಣಿಕ ಸೋಮಲಿಂಗ, ಸುನಿತಾ ಶೃಂಗೇರಿ, ತಾಪಂ ಐಇಸಿ ಸಂಯೋಜಕ ಮೋಶನ್, ಕಾಯಕ ಮಿತ್ರರಾದ ಕಲಾವತಿ, ಪ್ರಮುಖರಾದ ಯಲ್ಲಾಲಿಂಗ ಗರ, ಉಸ್ಮಾನ್, ಶಾಂತಕುಮಾರ ಹಡಪದ, ಚಂದ್ರಕಾAತ ಸಿಂಗೆ, ಗುರು ಹಳ್ಳಿ, ಮಲ್ಲಿಕ್, ರಾಹುಲ ಹಾವನೂರ, ಸಾಯಿಬಣ್ಣ ಬಬಲಾದ, ಪ್ರಭು ಯಾದವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net