ಸಾವಳಗಿ ಗ್ರಾಪಂಗೆ ಅವಿರೋಧ ಆಯ್ಕೆ

2808kLB05
Published on

ಕಲಬುರಗಿ: ಸಾವಳಗಿ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕನಗೊಂಡ, ಉಪಾಧ್ಯಕ್ಷರಾಗಿ ಅರುಣಿಕಾ ಸೋಮಲಿಂಗ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಪಡಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ೨೦ ಸದಸ್ಯರ ಬಲದ ಸಾವಳಗಿ (ಬಿ) ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ್, ಲಿಂಗರಾಜ ಕಣ್ಣಿ, ನೀಲಕಂಠರಾವ ಮೂಲಗೆ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪ್ರಮುಖರಾದ ವಿಜಯಕುಮಾರ ಕಟ್ಟಿಮನಿ, ಶಾಂತಕುಮಾರ ಹಡಪದ, ರಾಹುಲ್ ಹಾವನೂರ, ಯಲ್ಲಾಲಿಂಗ ಗರ, ಶಿವಾನಂದ ಹಡಪದ, ಮಲ್ಲು, ಈರಣ್ಣ ಡಬಕಿ, ಮಲ್ಲಿಕ್ ಮಿಂಚನ್, ಯಮುನಯ್ಯ ಗುತ್ತೇದಾರ್, ಉಸ್ಮಾನ್ ಲದಾಫ್, ಪರಮೇಶ್ವರ ಜಾನೆ, ಮಾಳಿಂಗರಾಯ, ಶಿವಲಿಂಗಪ್ಪ, ರಾಜು ರಡ್ಡಿ, ದಿನೇಶ ರಡ್ಡಿ, ಚಂದ್ರಕಾAತ ಸಿಂಗೆ, ಸೋಮಣ್ಣ, ಭೀರಣ್ಣ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net