

ವಿಜಯಪುರ: ರಾಜ್ಯಾದ್ಯಂತ ಸಾವರ್ಕರ್ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ರಾತ್ರೋರಾತ್ರಿ ಅವರ ಫೋಟೋ ರಾರಾಜಿಸಿದೆ.
ಇದೇನಪ್ಪ ವಿಚಿತ್ರ ಅಂತೀರಾ? ಹೌದು, ಕಾಂಗ್ರೆಸ್ ನಾಯಕರು ಸಾವರ್ಕರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರೆ ಇತ್ತ ಆ ಪಕ್ಷದ ಕಚೇರಿ ತುಂಬ ಸಾವರ್ಕರ್ ಫೋಟೋ ಕಣ್ಮನ ಸೆಳೆಯುತ್ತಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರಿ ಕೆಲವರು ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ. ಕಟ್ಟಡದ ಸುತ್ತ ಸಾರ್ವಕರ್ ಫೋಟೋಗಳೇ ಅಂಟಿರುವುದನ್ನು ಕಂಡು ಸುತ್ತಲಿನ ಜನ ಅಚ್ಚರಿಗೊಂಡಿದ್ದಾರೆ.
ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲು, ಬೋರ್ಡ್ ಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ. ಇದು ಹೋರಾಟದ ಒಂದು ಭಾಗ ಎನ್ನಲಾಗಿದೆ.