ಸಾವರ್ಕರ್ ಕುರಿತು ಉಪನ್ಯಾಸ ನಾಳೆ

IMG-20220826-WA0036.jpg
Published on

ದಾವಣಗೆರೆ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಈ ಬಗ್ಗೆ ಜಾಗೃತಿಗಾಗಿ ಆಗಸ್ಟ್ 27ರಂದು ಸಂಜೆ 6ಕ್ಕೆ ಮಿತ್ರ ಮಂಡಳಿಯಿಂದ ಸಾವರ್ಕರ್ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಮಿತ್ರ ಮಂಡಳಿಯ ಸಂಚಾಲಕ ಎಸ್.ಟಿ. ವೀರೇಶ್ ತಿಳಿಸಿದರು.

ವಿನೋಬನಗರದ ಎಂ.ಸಿ.ಸಿ. ಎ ಬ್ಲಾಕ್‌ನ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪತ್ರಕರ್ತೆ ಲಕ್ಷ್ಮೀ ರಾಜಕುಮಾರ್ ಸಾವರ್ಕರ್ ಬಗ್ಗೆ ಉಪನ್ಯಾಸ ನೀಡುವರು. ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್‌ನ ಅಧ್ಯಕ್ಷ ಮುರುಗೇಶ್ ಎನ್.ವಿ. ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕ ಕೆ.ಬಿ. ಶಂಕರ ನಾರಾಯಣ ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಣೇಶೋತ್ಸವ ಅಂಗವಾಗಿ ಮೂರ್ತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳಿಗೆ ಸಾವರ್ಕರ್ ಹಾಗೂ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರ ನೀಡಲಾಗುವುದು. ಸಾವರ್ಕರ್ ಅವರನ್ನು ಅಪಮಾನ ಮಾಡುವ ಬೆಳವಣಿಗೆಗಳು ಹೆಚ್ಚು ನಡೆಯುತ್ತಿದ್ದು, ಅವರ ಬಗ್ಗೆ ತಿಳಿಸುವ ಉದ್ದೇಶದಿಂದ ಮನೆಮನೆಗೆ ಅವರ ಭಾವಚಿತ್ರ ಹಾಗೂ ಅವರ ಕುರಿತ ಪುಸ್ತಕವನ್ನು ಹಂಚಲಾಗುತ್ತಿದೆ. ಈಗಾಗಲೇ 2ಸಾವಿರ ಪುಸ್ತಕ ವಿತರಿಸಲಾಗಿದೆ. 5 ಸಾವಿರ ಪುಸ್ತಕ ಹಂಚುವ ಉದ್ದೇಶ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪವನ್, ಜಗದೀಶ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net