ಸಾವರ್ಕರ್ ಅಪ್ರತಿಮ ದೇಶ ಭಕ್ತ

27-kgl-photo-1
ಕೊಳ್ಳೇಗಾಲ ಪಟ್ಟಣದ ಶ್ರೀನಾರಾಯಣ ಗುರು ವೃತ್ತದ ಬಳಿ ಸಾವರ್ಕರ್ ಅವರ ರಥಯಾತ್ರೆಗೆ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡಿದರು. ಜಿ.ಎನ್.ನಂಜುಂಡಸ್ವಾಮಿ, ಜಿ.ಪಿ.ಶಿವಕುಮಾರ್, ಧರಣೇಶ್, ಬಸವರಾಜಪ್ಪ ಇದ್ದರು.
Published on

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೇಳಿಕೆ

ಕೊಳ್ಳೇಗಾಲ: ಚಾಮರಾಜನಗರದಿಂದ ಆಗಮಿಸಿದ ಸಾವರ್ಕರ್ ರಥಯಾತ್ರೆಗೆ ಪಟ್ಟಣದ ಶ್ರೀ ನಾರಾಯಣಗುರು ವೃತ್ತದಲ್ಲಿ ಶುಕ್ರವಾರ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡುವ ಗೌರವ ಸಲ್ಲಿಸಿದರು.


ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ವೀರ ಸಾವರ್ಕರ್ ಅವರು ಅಪ್ರತಿಮ ದೇಶ ಭಕ್ತ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ತಮನ್ನು ತಾವೇ ಅರ್ಪಿಸಿಕೊಂಡ ಮಹನೀಯರಲ್ಲಿ ಸಾವರ್ಕರ್ ಪ್ರಮುಖರು. ಇಂದು ಇಡೀ ದೇಶಕ್ಕೆ ಸಾವರ್ಕರ್ ಚರಿತ್ರೆ ತಿಳಿದಿದೆ ಎಂದರು.


ಸಾವರ್ಕರ್ ಹೋರಾಟ ದಿನಗಳಲ್ಲಿ ದೇಶಪ್ರೇಮ, ಹಿಂದುತ್ವದ ಬಗ್ಗೆ ದೇಶದ ಉದ್ದಗಲಕ್ಕೂ ಜಾಗೃತಿ ಮೂಡಿಸಿದ್ದರು. ಅದರಂತೆ ಬಿಜೆಪಿ ಸಾವರ್ಕರ್ ಅವರ ಇತಿಹಾಸವನ್ನು ತಿಳಿಸಲು ರಥಯಾತ್ರೆ ಕೈಗೊಂಡಿದೆ. ಮೂರು ದಿನಗಳ ಹಿಂದೆ ಮೈಸೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ರಥಯಾತ್ರೆಗೆ ಚಾಲನೆ ಕೊಟ್ಟಿದ್ದು, ಚಾಮರಾಜನಗರ ಜಿಲ್ಲಾದ್ಯಂತ ರಥಯಾತ್ರೆ ಸಂಚರಿಸಲಿದೆ ಎಂದರು.


ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲದ ಜನರಿಗೆ ಮಹಾತ್ಮರ ಬಗ್ಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಅಲ್ಲದೇ, ಸಾವರ್ಕರ್ ಬಗೆಗಿನ ಪುಸ್ತಕಗಳನ್ನು ನೀಡುವ ಮೂಲಕ ಜಾಗೃತಗೊಳಿಸಬೇಕಿದೆ ಎಂದರು.

ಪ್ರಮುಖ ರಸ್ತೆಗಳಲ್ಲಿ ಸಾಗಿದ ರಥಯಾತ್ರೆ: ಪಟ್ಟಣದ ದೇವಾಂಗ ಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾವರ್ಕರ್ ರಥಯಾತ್ರೆ ಸಾಗಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ದೇಶದ ಪರವಾದ ಘೋಷಣೆಗಳನ್ನು ಕೂಗಿದರಲ್ಲದೆ, ಬೈಕ್ ರ‌್ಯಾಲಿಯಲ್ಲಿ ಸಾಗಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಜಿಲ್ಲಾ ವಕ್ತಾರ ಬಸವರಾಜಪ್ಪ, ನಗರ ಮಂಡಲ ಅಧ್ಯಕ್ಷ ಲಕ್ಷ್ಮೀಪತಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಲೋಕೇಶ್, ನಗರಸಭೆ ಸದಸ್ಯರಾದ ಜಿ.ಪಿ.ಶಿವಕುಮಾರ್, ಧರಣೇಶ್, ಎಲ್.ನಾಗೇಂದ್ರ, ಮುಖಂಡರಾದ ಉಪ್ಪಾರ ಸೋಮಣ್ಣ, ಕಿರಣ್, ಪ್ರಜ್ವಲ್, ಎಚ್. ಅವಿನಾಶ್, ಮಹಾದೇವಮ್ಮ, ಉಷಾ ರಾಣಿ, ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net