ಸಾವರಿನ್‌ಗೋಲ್ಡ್ ಬಾಂಡ್‌ಗೆ ಆರ್‌ಬಿಐ ಮೀನ,ಮೇಷ

gold-513062_640
Published on

ಚಿತ್ರದುರ್ಗ: ಶುದ್ಧ ಚಿನ್ನ ದರ ನಾಗಲೋಟದ ಈ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆ ಎಂದೇ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದ ಸಾವರಿನ್‌ಗೋಲ್ಡ್ ಬಾಂಡ್ ಸ್ಕೀಂ(ಎಸ್‌ಜಿಬಿ)ನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರ್‌ಬಿಐ ಹಿಂದೇಟು ಹೊಡೆಯುತ್ತಿದೆಯೇ ?

ಕೇಂದ್ರ ಸರ್ಕಾರ ಕಳೆದ ಬಜೆಟ್ ಮಂಡಿಸಿದ್ದ ಬಳಿಕ ಕೆಲ ದಿನಗಳ ಕಾಲ ಇಳಿಕೆಯಾಗಿದ್ದ ಶುದ್ಧ ಚಿನ್ನದ ದರ ಈಚಿನ ದಿನಗಳಲ್ಲಿ ಏರಿಕೆ ಯಾಗುತ್ತಲಿದ್ದು,ಚಿನ್ನಕ್ಕೆ ಬೆಳ್ಳಿ ಕೂಡ ಪೈಪೋಟಿ ನೀಡುತ್ತಿದೆ.

ಭೌತಿಕ ಚಿನ್ನದ ಬೇಡಿಕೆ ನಿಯಂತ್ರಿಸಲು ಹಾಗೂ ಸುರಕ್ಷಿತ ಹೂಡಿಕೆಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2015ನವೆಂಬ ರ್‌ನಲ್ಲಿ ಚಾಲನೆ ನೀಡಿದ್ದ ಸ್ಕಿಂನಲ್ಲಿ ಮತ್ತೆ ಹೂಡಿಕೆಗೆ ಅವಕಾಶ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಹಳೆಯ ಹಾಗೂ ಹೊಸ ಗ್ರಾಹಕರಿದ್ದಾರೆ. ಆದರೆ ಆರ್‌ಬಿಐ,ಎಸ್‌ಜಿಬಿ ಬಿಡುಗಡೆಗೆ ಮೀನ-ಮೇಷ ಎಣಿಸುತ್ತಿದೆ.

ಅಂಚೆ ಕಚೇರಿ/ಬ್ಯಾಂಕ್‌ಗಳಲ್ಲಿ ನೇರವಾಗಿ,ವಾರ್ಷಿಕ ಒಬ್ಬ ವ್ಯಕ್ತಿ/ಅವಿಭಜಿತ ಕುಟುಂಬಕ್ಕೆ 4 ಕೆಜಿ ಹಾಗೂ ಟ್ರಸ್ಟ್,ಸಂಸ್ಥೆಗಳಿಗೆ 20 ಕೆಜಿ ವ ರೆಗೆ ಶುದ್ಧ ಚಿನ್ನದ ಬಾಂಡ್‌ನ್ನು ಅವತ್ತಿನ ದರದಂತೆ ಖರೀದಿಸಬಹುದಾಗಿತ್ತು. ಲಾಕಿಂಗ್‌ಪಿರಿಯಡ್ 5 ವರ್ಷ ಹಾಗೂ ಬಾಂಡ್ ಮೆಚ್ಯೂ ರಿಟಿ ಪಿರಿಯಡ್ 8ವರ್ಷವಿರುವ ಈ ಯೋಜನೆಯಡಿ ಹೂಡಿಕೆ ಮೊತ್ತದ ಮೇಲೆ 2.50 ಬಡ್ಡಿ ಸಿಗುತ್ತಿದೆ.

ಇದನ್ನು ವರ್ಷದಲ್ಲಿ ಶೇ.1.25ನಂತೆ ಎರಡು ಬಾರಿ ಗ್ರಾಹಕರಿಗೆ ಪಾವತಿಯಾಗುತ್ತದೆ. ಯೋಜನೆ ಪರಿಚಯಿಸಿದ ಅಂದಿನಿಂದ ವರ್ಷ ದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ನಿರ್ದಿಷ್ಟ ಅವಧಿಯೊಳಗೆ ಹೂಡಿಕೆಗೆ ಅವಕಾಶವಿತ್ತು. ಆದರೆ ಕಳೆದ ಫೆಬ್ರವರಿ ದೊರಕಿದ್ದ ಈ ಅವಕಾ ಶ 9 ತಿಂಗಳಾದರೂ ಮತ್ತೆ ಸಿಕ್ಕಿಲ್ಲ.

ಹೂಡಿಕೆ ಮೊತ್ತವನ್ನು ಐದು ವರ್ಷದ ಬಳಿಕ ಹಿಂಪಡೆಯಲು ಅವಕಾಶವಿದೆ. ಗರಿಷ್ಠ ಅವಧಿ 8ವರ್ಷ ಪೂರ್ಣಗೊಂಡರೆ ಅವತ್ತಿನ ಶು ದ್ಧ ಚಿನ್ನದರ ಮೊತ್ತ ಗ್ರಾಹಕನ ಖಾತೆಗೆ ನೇರ ಜಮಾ ಹಾಗೂ ನಿಯಮಾನುಸಾರ ತೆರಿಗೆ ವಿಚಾರಕ್ಕೂ ಒಳಪಟ್ಟಿರುವ ಸ್ಕೀಂ ಬಾಂಡ್‌ನ್ನು ಸಾಲಕ್ಕೆ ಆಧಾರವಾಗಿಯೂ ಇಡಬಹುದಾಗಿದೆ.

ಭೌತಿಕ ಚಿನ್ನದಂತೆ ಕಾಯುವ ರಿಸ್ಕ್ ಇಲ್ಲ. ಆಭರಣ ಖರೀದಿ ವೇಳೆ ವೇಸ್ಟೇಜ್,ತಯಾರಿಕೆ ವೆಚ್ಚ ಇತ್ಯಾದಿಗಳೂ ಇರದ ಸ್ಕೀಂನ್ನು ಯಾಕೆ ತಡೆಹಿಡಿಯಲಾಗಿದೆ ಎಂಬ ಪ್ರಶ್ನೆಗೆ ಗ್ರಾಹಕರನ್ನು ಕಾಡಿದೆ. ಸ್ಕೀಂ ಪರಿಚಯಿಸಿದ್ದಾಗ ಇದ್ದ ಅಂದಾಜು 2684 ರೂ.ಇದ್ದ ಒಂದು ಗ್ರಾಂ ಶುದ್ಧ ಚಿನ್ನದ ದರ,ಕಳೆದ ಫೆಬ್ರವರಿಯಲ್ಲಿ 5886 ರೂ.ಆಸುಪಾಸಿನಲ್ಲಿತ್ತು.

ಕೋಟ್

ಕಳೆದ ಫೆಬ್ರವರಿಯಲ್ಲಿ ಟ್ರೆಂಚ್(ಎಸ್‌ಜಿಪಿಯಲ್ಲಿ ಹೂಡಿಕೆ ಅವಕಾಶ)ಬಿಡುಗಡೆಯಾಗಿತ್ತು.ಬಳಿಕ ಮತ್ತೆ ಈ ಕುರಿತಂತೆ ಈವರೆಗೂ ಯಾ ವುದೇ ಗೈಡ್‌ಲೈನ್ ಅಥವಾ ಮಾಹಿತಿ ಬಂದಿಲ್ಲ.

ಕೆ.ಆರ್.ಉಷಾ,ಅಂಚೆ ಅಧೀಕ್ಷಕರು,ಚಿತ್ರದುರ್ಗ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net