

ಮುನವಳ್ಳಿ: ರೈತರು ಭೂಸಂಜೀವಿನಿ ಸಾವಯವ ಗೊಬ್ಬರ ಬಳಕೆ ಮಾಡಿಕೊಳ್ಳುವ ಮೂಲಕ ಭೂಮಿಯ ಲವತ್ತತೆ ಹೆಚ್ಚುವ ಜತೆಗೆ ಅಧಿಕ ಇಳುವರಿ ಪಡೆಯಬಹುದು ಎಂದು ರೇಣುಕಾ ಶುಗರ್ ಕಬ್ಬು ವಿಭಾಗದ ಹಿರಿಯ ಸಲಹೆಗಾರ ಎಸ್.ಆರ್. ನೆರ್ಲೆಕರ ಹೇಳಿದರು.
ಪಟ್ಟಣದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಖಾನೆಯಿಂದ ತಯಾರಿಸಿದ ಭೂ ಸಂಜೀವಿನಿ ಸಾವಯವ ಗೊಬ್ಬರವನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭೂ ಸಂಜೀವಿನಿ ಗೊಬ್ಬರದಿಂದ ಭೂಮಿಯ ಲವತ್ತತೆ ಹೆಚ್ಚಲಿದೆ ಎಂದರು.
ಕಾರ್ಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಅಭಯ ಖೋತ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು. ಕಬ್ಬು ವಿಭಾಗದ ಮುಖ್ಯಸ್ಥ ಎನ್.ಎಸ್.ಮುಗಳಖೋಡ, ಸಾವಯವ ಗೊಬ್ಬರದ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಸಿಂಗ್, ಎ.ವಿ.ತುರುಂಬೆಕರ, ವೀರಯ್ಯ ವಿರಕ್ತಮಠ, ಡಿ.ಸುನೀಲಕುಮಾರ ಇತರರಿದ್ದರು.