

ತಲ್ಲೂರ: ರೈತರು ಕೃಷಿಯಲ್ಲಿ ರಾಸಾಯನಿಕ ಔಷಧ ಬಳಕೆ ಕಡಿಮೆಗೊಳಿಸುವ ಮೂಲಕ ಸಾವಯವ ಗೊಬ್ಬರ ಬಳಕೆಗೆ ಮುಂದಾಗಬೇಕು ಎಂದು ಎಪಿಎಂಸಿ ಸದಸ್ಯ ಸಿದ್ಧಾರೂಢ ಬಿಲಕಂಚಿ ಹೇಳಿದರು.
ಸಮೀಪದ ಮದ್ಲೂರ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ಧಾರವಾಡದ ಯೂನಿವರ್ಸಲ್ ಅಗ್ರಿ ಮತ್ತು ಬಯೋಟೆಕ್ ಹಾಗೂ ರಾಜ್ಯ ರೈತ ಸಂಘದ ಮದ್ಲೂರ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಕೀಲ ಎಂ.ಬಿ.ಕಲಕುಟ್ರಿ ಮಾತನಾಡಿ, ರೈತರು ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡಲ್ಲಿ ಲಾಭದಾಯಕ ಸಲು ತೆಗೆಯಲು ಸಹಾಯಕವಾಗುತ್ತದೆ ಎಂದರು.
ಧಾರವಾಡ ಯೂನಿವರ್ಸಲ್ ಅಗ್ರಿ ಮತ್ತು ಬಯೋಟೆಕ್ ಎಂಡಿ ಪ್ರವೀಣ ನೀಲನ್ನವರ, ಮಹಾಂತೇಶ ತೇಲಿ, ಲಕ್ಷ್ಮಣ ಮೇಟಿ ಮಾತನಾಡಿದರು. ಕೃಷಿ ಚೇತನ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.
ರೈತ ಸಂಘ ಅಧ್ಯಕ್ಷ ಸಂಗಪ್ಪ ಸೊಪ್ಪಡ್ಲ, ಕ್ಷೇತ್ರಾಧಿಕಾರಿ ಶಿವಾನಂದ ಓಂಕಾರಿ, ಆದಿಶಕ್ತಿ ಕೃಷಿ ಸೇವಾ ಸಂಸ್ಥೆ ಅಧ್ಯಕ್ಷ ಯಲ್ಲಪ್ಪಗೌಡ ಗಂದಿಗೌಡ್ರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಲಕ್ಷ್ಮಣ ಬನ್ನೂರ, ಕ್ರುಸಾಬ್ ದೊಡ್ಡಮನಿ, ಮಹಾದೇವ ಮುರಗೋಡ, ಶ್ರೀಕಾಂತ ನಾಯ್ಕರ, ವಿಠ್ಠಲ ಗೌಡರ, ಕೀರಪ್ಪ ಹೂಟಿ, ಮಾರುತಿ ಕುರಿ, ದ್ಯಾಮಣ್ಣ ಗೊಗ್ಗಿ, ಸದ್ದಾಂ ಪರಾಸಿ, ಭರಮಪ್ಪ ಚಂದರಗಿ, ಚಿದಾನಂದ ಹಂಚಿನಮನಿ ಇತರರಿದ್ದರು. ವಿಠ್ಠಲ ಪಚ್ಚಿನವರ ನಿರೂಪಿಸಿದರು.