

ಅಫಜಲಪುರ: ಖರ್ಚು ಕಮ್ಮಿ, ಆದಾಯ ಹೆಚ್ಚು ಮತ್ತು ಭೂಮಿಯ ಫಲವತ್ತತೆ ಕಾಪಾಡಲು ಪೂರಕವಾಗಿರುವ ಸಾವಯವ ಕೃಷಿಯನ್ನು ಪ್ರತಿಯೊಬ್ಬ ರೈತ ಅಳವಡಿಸಿಕೊಳ್ಳಬೇಕು ಎಂದು ಜಿ¯್ಲÁಧಿಕಾರಿ ಬಿ.ಫೌಜಿಯಾ ತರುನ್ನುಮ್ ಹೇಳಿದರು.
ಹಸರಗುಂಡಗಿ ಗ್ರಾಮದಲ್ಲಿ ಸಾವಯವ ಕೃಷಿ ತಜ್ಞ ಹನುಮಂತಪ್ಪ ಬೆಳಗುಂಪಿ ತೋಟದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾವಯವ ಕೃಷಿಯಲ್ಲಿ ಬೆಳಗುಂಪಿ ಒಳ್ಳೆಯ ಹಣ್ಣುಗಳನ್ನು ಬೆಳೆದಿz್ದÁರೆ. ಇವರಂತೆ ಎಲ್ಲ ರೈತರು ಸಾವಯವ ಕೃಷಿ ಮೂಲಕ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ಸಾವಯವ ತಜ್ಞ ಹನುಮಂತಪ್ಪ ಬೆಳಗುಂಪಿ ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿ ಎಂದರೆ ರಾಸಾಯನಿಕಮುಕ್ತ ಕೃಷಿ ವಿಧಾನ. ಇದು ಪ್ರಕೃತಿಯ ನಿಯಮ ಆಧರಿಸಿದ್ದು, ಪರಿಸರ ಸ್ನೇಹಿಯಾಗಿದೆ. ಬೆಳೆ, ಜಾನುವಾರು ಮತ್ತು ಮರಗಳನ್ನು ಒಳಗೊಂಡಿರುವ ಜೀವವೈವಿಧ್ಯವನ್ನು ಉತ್ತೇಜಿಸುತ್ತದೆ. ಲಭ್ಯವಿರುವ ಸಂಪನ್ಮೂಲ ಬಳಸಿ ರೈತರು ಕೃಷಿ ವೆಚ್ಚ ಕಡಿಮೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಹೇಳಿದರು.
ಪ್ರಮುಖರಾದ ಶಿವು ಬೆಳಗುಂಪಿ, ಶಂಕರ ರೂಮ್ಗೋಳ, ಅಣ್ಣಾರಾಯ ಪಟ್ಟೆದಾರ, ಬಾಬು ರಾಜ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಡಿಡಿ ಸಂತೋಷ ಇನಾಮದಾರ, ಪಶು ಸಂಗೋಪನೆ ಡಿಡಿ ಸಂಜಯರೆಡ್ಡಿ, ತಹಸೀಲ್ದಾರ್ ಸಂಜೀವಕುಮಾರ ದಾಸರ್, ಕೃಷಿ ಎಡಿ ಎಸ್.ಎಚ್. ಗಡಿಗಿಮನಿ, ತೋಟಗಾರಿಕೆ ಎಡಿ ಶಂಕರಗೌಡ ಪಾಟೀಲï, ಪಶು ಸಂಗೋಪನೆ ಎಡಿ ಕೆ.ಎಂ. ಕೋಟೆ ಇತರರಿದ್ದರು.
ಬಳಿಕ ಡಿಸಿ ಫೌಜಿಯಾ ತರನ್ನುಮ್ ಅವರು ಗೊಬ್ಬುರ್(ಕೆ)ದಲ್ಲಿ ರೈತ ಬೆಳೆದಿರುವ ಡ್ರಾÈಗನ್ ಫ್ರೂಟ್ಸ್ ಪರಿಶೀಲಿಸಿದರು. ನಂತರ ಚೌಡಾಪುರದಲ್ಲಿ ಕೃಷಿ ಇಲಾಖೆ ಸಹಾಯಧನದಡಿ ಆರಂಭಿಸಿರುವ ಬೇಳೆ ಕಾರ್ಖಾನೆ ಮತ್ತು ಉಡಚಣ ಹಟ್ಟಿಯಲ್ಲಿನ ಕುರಿ ಸಾಕಣೆ ಕೇಂದ್ರ ಹಾಗೂ ಅಳ್ಳಗಿ(ಬಿ) ಅರವಿಂದ ಹಾಳಕಿ ತೋಟದಲ್ಲಿ ಕೃಷಿ ಹೊಂಡ ವೀಕ್ಷಿಸಿದರು.