ಸಾವಯವ ಕೃಷಿಗೆ ಒತ್ತು ನೀಡಿ

ರಾಮದುರ್ಗದಲ್ಲಿ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಮಲ್ಲಿಕಾರ್ಜುನ ಹೆಗ್ಗನ್ನವರ, ಆರ್.ಎಂ. ಪಾಟೀಲ ಇತರರಿದ್ದರು.
ರಾಮದುರ್ಗದಲ್ಲಿ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಮಲ್ಲಿಕಾರ್ಜುನ ಹೆಗ್ಗನ್ನವರ, ಆರ್.ಎಂ. ಪಾಟೀಲ ಇತರರಿದ್ದರು.
Published on

ರಾಮದುರ್ಗ ಬೆಳಗಾವಿ: ಗ್ರಂಥಾಲಯಗಳು ಜ್ಞಾನ ಭಂಡಾರ ಹೆಚ್ಚಿಸುವ ಕೇಂದ್ರಗಳಿದ್ದಂತೆ. ಗ್ರಂಥಾಲಯಕ್ಕೆ ಭೇಟಿ ನೀಡಿ, ಅಲ್ಲಿರುವ ಪುಸ್ತಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು. ಇಲ್ಲಿನ ಸಾರ್ವಜನಿಕ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಂಥಪಾಲಕ ಸಿದ್ದು ಮೋಟೆ ಮಾತನಾಡಿ, ನ.30 ರಂದು ಶತಮಾನೋತ್ತರ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು. ನಿವೃತ್ತ ಉಪನ್ಯಾಸಕ ಆರ್.ಎಂ. ಪಾಟೀಲ ಮಾತನಾಡಿದರು. ಬಿಜಗುಪ್ಪಿಯ ಶ್ರೀಸುವೃತಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಸೈನಿಕ ಪುಂಡಲೀಕ ನಡಗಡ್ಡಿ, ಸುಭಾಷ ದಾಸರ, ಸಿಬ್ಬಂದಿ ಕೃಷ್ಣ ಕಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net