

ಮೂಡಲಗಿ: ರೈತರು ಸಾವಯವ ಕೃಷಿ ಅಳವಡಿಸಿಕೊಂಡು ತಮ್ಮ ಆರೋಗ್ಯದೊಂದಿಗೆ ಸಮಾಜದ ಆರೋಗ್ಯವನ್ನೂ ಕಾಪಾಡಬೇಕು ಎಂದು ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಹೇಳಿದರು. ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ರೈತ ಮಹಿಳೆ ಆಶಾ ಭರತ ಮಹಾತ್ರೆ ಅವರ ತೋಟದಲ್ಲಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆ ಸಹಯೋಗದಲ್ಲಿ ಈಚೆಗೆ ಏರ್ಪಡಿಸಿದ್ದ ಗೋವಿನ ಜೋಳ ಕ್ಷೇತ್ರೋತ್ಸವ ಹಾಗೂ ರೈತರ ಗೋಷ್ಠಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಭೂಮಿಯಲ್ಲಿ ನೀರನ್ನು ಇತಿಮಿತಿಯಲ್ಲಿ ಬಳಸಿ ಭೂಮಿಯ ಫಲವತ್ತತೆ ಕಾಯ್ದುಕೊಂಡು ಅಧಿಕ ಇಳುವರಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಕಾಕ ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಎಂ.ಎಂ.ನದಾಫ್ ಮಾತನಾಡಿ, ರೈತರು ಸಮಗ್ರ ಕೃಷಿಯನ್ನು ಅನುಸರಿಸಿಕೊಂಡು ತಮಗೆ ಲಭ್ಯವಿರುವ ಭೂಮಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಕೃಷಿ ತಜ್ಞರಾದ ತುಕ್ಕಾನಟ್ಟಿಯ ಡಾ. ಡಿ.ಸಿ. ಚೌಗಲಾ ಹಾಗೂ ಡಾ. ಮಾರುತಿ ಮಳವಾಡ ಪ್ರಾಸ್ತಾವಿಕ ಮಾತನಾಡಿದರು. ಗಾಮ ಪಂಚಾಯಿತಿ ಅಧ್ಯಕ್ಷ ಕುಮಾರ ಮರ್ದಿ, ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿ ಎ.ಜಿ.ಮಳವಾಡ, ಅರಬಾವಿ ಕೃಷಿ ಅಧಿಕಾರಿ ಶಂಕರ ಹಳ್ಳದಮನಿ, ಪ್ರಗತಿಪರ ರೈತರಾದ ಬಿ.ಆರ್. ಬಾಗೇವಾಡಿ, ಆತ್ಮ ಯೋಜನೆಯ ಛಾಯಾ ಪಾಟೀಲ, ಗುರುನಾಥ ಮಲ್ಲಾಪುರ, ಬಾಪು ಗದಾಡಿ, ಸಿದ್ದಪ್ಪ ಮದೂರ, ಬಾಳಪ್ಪ ಬಬಲಿ, ಶಿವಪುತ್ರ ಮಲ್ಲಾಪುರ, ಹನುಮಂತ ಗದಾಡಿ, ಮತ್ತೆಪ್ಪ ಹುಲಕುಂದ, ಶಿವಪುತ್ರ ಹುಲಕುಂದ, ರಾಮಪ್ಪ ಬಾಗೇವಾಡಿ ಇತರರು ಇದ್ದರು.