ಸಾಲಿಗ್ರಾಮ ಮೀನು ಮಾರ್ಕೆಟ್ ಅವ್ಯವಸ್ಥೆ

Fish market
Published on

ಕೋಟ: ಸಾಲಿಗ್ರಾಮ ಮೀನು ಮಾರುಕಟ್ಟೆಯಲ್ಲಿ ತ್ಯಾಜ್ಯ ರಾಶಿಯ ಕೊಂಪೆ, ವಾಸನೆಯುಕ್ತ ನೀರು, ಕಟ್ಟಡ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲೇ ಹಸಿ ಮೀನು ಮಾರುವವರು ವ್ಯವಹರಿಸಬೇಕಿದ್ದು, ಈ ಬಗ್ಗೆ ಸಂಬಂಧಿತರ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ. ಮಾರುಕಟ್ಟೆ ಸೋರುತ್ತಿದ್ದು, ಸಿಮೆಂಟ್ ಚಪ್ಪರ ದುರ್ಬಲವಾಗಿದೆ. ಇದರೊಳಗೇ ಮಹಿಳಾ ಮೀನುಗಾರರು ವ್ಯಾಪಾರ ಮಾಡಬೇಕು. ಸಾಲಿಗ್ರಾಮದಲ್ಲಿ ಸಮರ್ಪಕ ಮೀನು ಮಾರ್ಕೆಟ್ ನಿರ್ಮಿಸಲು ಸ್ಥಳೀಯಾಡಳಿತ ನಿರ್ಲಕ್ಷೃ ವಹಿಸುತ್ತಿದೆ ಎನ್ನುವುದು ಜನರ ಆರೋಪ. ಕೋಟದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯಿದ್ದರೂ ವ್ಯವಹಾರಸ್ಥರು ಇಲ್ಲ. ಸಾಲಿಗ್ರಾಮದಲ್ಲಿ ವ್ಯವಹಾರಸ್ಥರಿದ್ದರೂ ಮಾರುಕಟ್ಟೆಯಿಲ್ಲ. ಸಂಬಂಧಿತರು ಮುತುವರ್ಜಿ ವಹಿಸಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಕೋಟ ಹೋಬಳಿ ರೈತ ಧ್ವನಿ ಸಂಘ ಅಧ್ಯಕ್ಷ ಜಯರಾಮ ಶೆಟ್ಟಿ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಉಳಿದಿರುವ ಸ್ಥಳದಲ್ಲಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಿಕೊಡಲಾಗುವುದು. ಉಡುಪಿ ಜಿಲ್ಲಾಧಿಕಾರಿಗೆ ನಕ್ಷೆಯೊಂದಿಗೆ 10 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣ ಪಂಚಾಯಿತಿ ಮೂಲಕ ಶೀಘ್ರ ಮಾರುಕಟ್ಟೆ ನಿರ್ಮಿಸಲಾಗುವುದು. | ಅರುಣ್ ಬಿ. ಮುಖ್ಯಾಧಿಕಾರಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ 60 ವರ್ಷಗಳಿಂದ ಸಾಲಿಗ್ರಾಮ ಮುಖ್ಯ ಪೇಟೆಯಲ್ಲಿ ಮಾರುಕಟ್ಟೆ ಮೂಲಕ ವ್ಯವಹರಿಸಿಕೊಂಡು ಬರುತ್ತಿದ್ದೇವೆ. ಮಾರುಕಟ್ಟೆ ಬಿದ್ದುಹೋಗುವ ಸ್ಥಿತಿಯಲ್ಲಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. | ರಾಧಾ ಕೋಡಿ ಕನ್ಯಾಣ ಅಧ್ಯಕ್ಷರು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘ ಸಾಲಿಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net