ಸಾಲಭಾದೆ ರೈತ ಆತ್ಮಹತ್ಯೆ

crime
Published on

ಸಾಲಭಾದೆ ರೈತ ಆತ್ಮಹತ್ಯೆ

ಚಿಕ್ಕೋಡಿ : ಸಾಲಬಾಧೆಯಿಂದ ರೈತನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಳಕೂಡ ಗ್ರಾಮದ ವಿದ್ಯಾನಗರದಲ್ಲಿ ಶುಕ್ರವಾರ ನಡೆದಿದೆ.

ಬೆಳಕೂಡ ಗ್ರಾಮದ ರೈತ ಸತ್ಯಪ್ಪ ಸಿದ್ದರಾಮ ಮುಗಳಿ (64) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಕೃಷಿ ಜಮೀನಿನಲ್ಲಿ ಬಾವಿ ತೊಡಲು ವಿವಿಧ ಖಾಸಗಿ ಬ್ಯಾಂಕ್‌ಗಳಲ್ಲಿ ಒಟ್ಟು 3.60 ಲಕ್ಷ ಸಾಲ ಮಾಡಿದ್ದನು. ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net