ಸಾಲಬಾಧೆಯಿಂದ ರೈತ ಆತ್ಮಹತ್ಯೆ

19blrp3
ರೈತ ಕುಮಾರ್‌ನಾಯಕ್ ಅವರ ಆತ್ಮಹತ್ಯೆ ವಿಷಯ ತಿಳಿದು ಬೇಲೂರು ತಾಲೂಕಿನ ಮತ್ತಿಘಟ್ಟ ಗ್ರಾಮಕ್ಕೆ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ಮಾಹಿತಿ ಪಡೆದರು.
Published on

ಬೇಲೂರು: ತಾಲೂಕಿನ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತಿಘಟ್ಟ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ತೋಟದ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತಿಘಟ್ಟ ಗ್ರಾಮದ ಕುಮಾರ್‌ನಾಯಕ್ (48) ಆತ್ಮಹತ್ಯೆ ಮಾಡಿಕೊಂಡವರು. ಇವರು ಕೃಷಿಗಾಗಿ ಹಳೇಬೀಡಿನ ಕೆನರಾ ಬ್ಯಾಂಕ್‌ನಲ್ಲಿ 4 ಲಕ್ಷ ರೂ. ಗೂ ಹೆಚ್ಚು ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗದೆ ತಮ್ಮ ತೋಟದ ಮನೆಯ ಬಾಗಿಲಿನಲ್ಲಿ ಬುಧವಾರ ವಿಷ ಕುಡಿದು ಸಾವಿಗೀಡಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರು ಇದ್ದಾರೆ. ಬುಧವಾರ ಸಂಜೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಎಂ.ಮಮತಾ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net