ಸಾಲಬಾಧೆಗೆ ನೇಣಿಗೆ ಶರಣು

Hanging
Published on

ಚಿಕ್ಕೋಡಿ: ಸಾಲಬಾಧೆಯಿಂದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಟನೆ ಪಟ್ಟಣದ ಇಂದಿರಾನಗರದಲ್ಲಿ ಮಂಗಳವಾರ ನಡೆದಿದೆ.

ಅನಿಲ ರಾಮು ಜಾಧವ (34) ಮೃತ. ಇತ ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದ, ಅಲ್ಲಿಂದ ಚಿಕ್ಕೋಡಿಗೆ ಬಂದು ಹೊಸ ಉದ್ಯೋಗ ಆರಂಭಿಸಿದ್ದ. ಉದ್ಯೋಗಕ್ಕಾಗಿ ಖಾಸಗಿಯಾಗಿ 9.50 ಲ ರೂ. ಸಾಲ ಮಾಡಿ, ಸಾಲಗಾರರ ಕಾಟದಿಂದ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net