ಸಾಲಬಾಧೆ :ರೈತ ಆತ್ಮಹತ್ಯೆ

Former sucide+2
Published on

ಸಾಲಬಾಧೆ ರೈತ ಆತ್ಮಹತ್ಯೆ

ಸಂಕೇಶ್ವರ: ಇತ್ತೀಚಿಗೆ ಫೈನಾನ್ಸ್ ಹಾಗೂ ಬ್ಯಾಂಕ್ ಹಾವಳಿಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಆಸ್ತಿ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರೈತನೋರ್ವ ಆತ್ಮಹತ್ಯೆ ಶರಣಾಗಿರುವ ಘಟನೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ರೈತ ವೀರಭದ್ರ ಬಸವಣ್ಣಿ ಮಾದನ್ನವರ (೪೦) ದಿ. ಕಮ್ಯೂನಿಟಿ ಫೈನಾನ್ಸ್ ಪ್ರೈವೇಟ್.ಲಿ., ಫೈನಾನ್ಸ್ ವತಿಯಿಂದ ಪಡೆದ ೯ ಲಕ್ಷ ೯೦ ಸಾವಿರ ಸಾಲ ಮರುಪಾವತಿಸದಿದ್ದಕ್ಕಾಗಿ ಆತನ ಮನೆ ವಿಪಿಸಿ ನಂ. ೧೮೦೧ಎ ಹರಾಜು ಮಾಡುವುದಾಗಿ ಗ್ರಾಮದಲ್ಲಿ ನೋಟಿಸ್ ಹಚ್ಚುವ ಜೊತೆಗೆ ರಿಕ್ಷಾ ಮೂಲಕ ಡಂಗುರ ಸಾರಲಾಗಿತ್ತು. ಇದರಿಂದ ಮಾನಹಾನಿಗೊಳಗಾಗಿ ಮಾನಸಿಕ ಖಿನ್ನತೆಗಳೊಗಾಗಿದ್ದ ರೈತ ವೀರಭದ್ರ ನೇಣಿಗೆ ಶರಣಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕೃಷಿ ಹಾಗೂ ಪಶುಸಂಗೋಪನೆ ಕಾರ್ಯದಲ್ಲಿ ತೊಡಗಿದ್ದ ರೈತ ಅದರಿಂದ ಆಗಿದ್ದ ನಷ್ಟದಿಂದ ಸಕಾಲಕ್ಕೆ ಸಾಲ ಮರುಪಾವತಿಸಲಾಗದೇ ತನ್ನ ಎಲ್ಲ ಆಸ್ತಿ ಸಹ ಮಾರಾಟ ಮಾಡಿದ್ದು ಫೈನಾನ್ಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮೃತನಿಗೆ ತಂದೆ-ತಾಯಿ, ಪತ್ನಿ, ಐವರು ಪುತ್ರರು ಇದ್ದಾರೆ.

ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net