

ಕೊಳ್ಳೇಗಾಲ: ಸಾಲದ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಗೆ 78,199 ರೂ.ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಧುವನಹಳ್ಳಿ ಗ್ರಾಮದ ನಿವಾಸಿ ಮಣಿಕಂಠ ಎಂಬುವವರಿಗೆ ನ.13 ರಂದು ಬೆಳಗ್ಗೆ 11ಗಂಟೆ ಸಮಯದಲ್ಲಿ ಬಜಾಜ್ ಕಂಪನಿ ಹೆಸರಿನ ಮೊ. 7596892308 ಸಂಖ್ಯೆಯಿಂದ ಕರೆ ಬಂದಿದೆ. ಈ ನಂಬರ್‌ಗೆ ಲೋನ್ ಪೇಪರ್ ಖರ್ಚು ನೀಡಿದರೆ ನಿಮ್ಮ ಖಾತೆಗೆ ಒಂದು ಲಕ್ಷ ರೂ. ಲೋನ್ ಹಣ ನೀಡುತ್ತೇವೆ ಎಂದು ಹೇಳಿ ಒಟ್ಟು 78,199 ರೂ. ಫೋನ್ ಪೇ ಮೂಲಕ ಜಮಾ ಮಾಡಿಸಿಕೊಂಡು ವಂಚಿಸಲಾಗಿದೆ. ಮಣಿಕಂಠ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೆಚ್ಚಿನ ತನಿಖೆಗೆ ಚಾಮರಾಜನಗರ ಸೈಬರ್ ಕ್ರೈಂ ಬ್ರಾೃಂಚ್‌ಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.