

ತರೀಕೆರೆ: ಬ್ಯಾಂಕ್, ಮೈಕ್ರೋ ೈನಾನ್ಸ್ ಮತ್ತು ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಪ್ಪಿಸಿ ರೈತರು ಮತ್ತು ಸಾಲಗಾರರ ಜೀವ ಉಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಯಲ್ಲಿ ಎಸಿ ಡಾ. ಕೆ.ಜೆ.ಕಾಂತರಾಜ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಸೋಮಶೇಖರಯ್ಯ ಮಾತನಾಡಿ, ರೈತರು, ಬಡ ಕೂಲಿ ಕಾರ್ಮಿಕರು ಇತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಜನ ಕಷಿ ಚಟುವಟಿಕೆಗೆ ಮಾತ್ರವಲ್ಲ, ಜೀವನೋಪಾಯಕ್ಕಾಗಿಯೂ ಬ್ಯಾಂಕ್, ಮೈಕ್ರೋ ೈನಾನ್ಸ್ ಜತೆ ಕೈ ಸಾಲ ಮಾಡುವುದು ಸಹಜ. ಆದರೆ ಸಾಲ ಸಕಾಲದಲ್ಲಿ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಸಾಲ ಕೊಟ್ಟವರ ಕಿರುಕುಳ ಸಹಿಸಲಾಗದೆ ಆತ್ಯಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಮೀಟರ್ ಬಡ್ಡಿ, ಮೈಕ್ರೋ ೈನಾನ್ಸ್ ಹಾಗೂ ಬ್ಯಾಂಕ್ ಸಿಬ್ಬಂದಿ ಕಿರುಕುಳ ತ್ಪಪ್ಪಿಸಲು ಹೊಸ ಕಾಯ್ದೆ ಜಾರಿಗೆ ತಂದಿದೆಯಾದರೂ ಉಪಟಳ ಕಡಿಮೆಯಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳು ಜನರಲ್ಲಿ ಜಾಗತಿ ಮೂಡಿಸಿ ಸಾಲಗಾರರಿಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಮುಖರಾದ ಜಿ.ಪಿ.ಬಸವರಾಜಪ್ಪ, ಎಚ್.ಎಸ್.ನಂಜುಂಡಯ್ಯ, ಎಸ್.ಮಧುಕುಮಾರ್, ಬಿ.ಇ.ಸುರೇಶ್, ಲಕ್ಷತ್ಮಮ್ಮ ಇತರರಿದ್ದರು.