ಸಾಲಗಾಮೆ ನಂಜುಂಡೇಗೌಡ ಚಿತ್ರೋತ್ಸವ 2020ಕ್ಕೆ ಚಾಲನೆ

IMG_20200126_130709.JPG
Published on

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಸಾಲಗಾಮೆ‌ ನಂಜುಂಡೇಗೌಡ ಚಲನಚಿತ್ರೋತ್ಸವವನ್ನು ಹಿರಿಯ ನಟ ಶ್ರೀನಿವಾಸಮೂರ್ತಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಾಲಗಾಮೆ ನಂಜುಡೇಗೌಡ ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಉತ್ಸಾಹಿ. ಹಲವು ಪ್ರಶಸ್ತಿ ಪಡೆದಿರುವ ಅವರ ನಿರ್ದೇಶನದ ಚಿತ್ರದಲ್ಲಿ ನಾನು ನಟಿಸಿದ್ದೇನೆ ಅನ್ನುವುದು ಸಂತೋಷದ ವಿಷಯ ಎಂದರು.

ನಾನು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾಗ ಹಾಸನದಲ್ಲಿ ೨ ತಿಂಗಳು ಪ್ರದರ್ಶನ ನೀಡಿದ್ದೆವು. ಹಾಸನ ಜಿಲ್ಲೆ ಕಲಾವಿದರಿಗೆ ಉತ್ತೇಜನ ನೀಡುವ ಜಿಲ್ಲೆ ಎಂದು ಶ್ಲಾಘಿಸಿದರು.

ಸಚಿವ ಮಾಧುಸ್ವಾಮಿ ಸಂಕ್ರಾಂತಿ ಸೊಗಡು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಹಿರಿಯ ನಟ ರಮೇಶ್ ಭಟ್, ಸಂಗೀತ ನಿರ್ದೇಶಕ ವಿ.ಮನೋಹರ್, ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದವರು ಪಾಲ್ಗೊಂಡಿದ್ದರು.

27 ರಿಂದ 29ರವರಗೆ ಪ್ರತಿ‌ದಿನ ಬೆಳಗ್ಗೆ 8 ಗಂಟೆಯಿಂದ ಎಸ್.ಬಿ.ಜಿ. ಚಿತ್ರಮಂದಿರದಲ್ಲಿ ನಂಜುಂಡೇಗೌಡ ನಿರ್ದೇಶನದ ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net