ಸಾಲ ವಿತರಣೆ ಶೇ.100 ಸಾಧನೆಯಾಗಲಿ

24CBP3Bank
Published on

ಚಿಕ್ಕಬಳ್ಳಾಪುರ : ಸಾಮಾಜಿಕ ಭದ್ರತೆ ಯೋಜನೆಯಡಿ ಆರ್ಥಿಕ ನೆರವು ಮತ್ತು ಸಾಲ ವಿತರಣೆಯ ಪ್ರಕ್ರಿಯೆಯಲ್ಲಿ ಶೇ.100 ರಷ್ಟು ಗುರಿ ಸಾಧಿಸಬೇಕೆಂದು ಜಿಪಂ ಸಿಇಒ ಪಿ.ಶಿವಶಂಕರ್ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಬ್ಯಾಂಕುಗಳ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ನರೇಗಾ, ವಿದ್ಯಾರ್ಥಿಗಳ ಆಧಾರ್ ಜೋಡಣೆ, ಕೃಷಿ, ಉದ್ಯಮ ಸಾಲ ಮತ್ತು ಕಿರು ಸಾಲಗಳ ಪ್ರಾಮುಖ್ಯತೆ ಮತ್ತು ಸಾಲ ವಿತರಣೆಯಲ್ಲಿ ಉತ್ತಮ ಸಾಧನೆ ತೋರಿರುವುದ ಜತೆಗೆ ಪೂರ್ಣಪ್ರಮಾದ ಗುರಿ ಸಾಧಿಸಬೇಕೆಂದರು.

ಬ್ಯಾಂಕುಗಳು ಅತ್ಯುತ್ತಮ ಗ್ರಾಹಕರ ಸೇವೆ ನೀಡುತ್ತಿದ್ದು ಪಿಎಂ ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಅತಿ ಹೆಚ್ಚು ಸಾಲ ವಿತರಿಸಲಾಗುತ್ತಿದೆ ಎಂದು ಕೆನರಾ ಬ್ಯಾಂಕ್‌ನ ಸಹಾಯಕ ಮುಖ್ಯ ವ್ಯವಸ್ಥಾಪಕಿ ಮಮತಾ ಜೋಶಿ ತಿಳಿಸಿದರು.ಪ್ರಾಥಮಿಕ ವಲಯ ಕೃಷಿ ಸಂಬಂಧಿತ ಸಾಲಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಶಂಕರ್ ಕೊಕ್ಕಡ್ ಸೂಚಿಸಿದರು.ಎಸ್‌ಬಿಐ ಮುಖ್ಯ ವ್ಯವಸ್ಥಾಪಕಿ ಮಾಣಿಮಾಲ, ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಡಿ.ವಿ.ಸುರೇಶ್ ಕುಮಾರ್ ಇತರರಿದ್ದರು.

ಸಾಲ ಯೋಜನೆ ಪುಸ್ತಕ ಬಿಡುಗಡೆ : ಪ್ರಸಕ್ತ 2021-22ನೇ ಸಾಲಿನ ವಾರ್ಷಿಕ ಸಾಲ ಯೋಜನೆ ಗುರಿಯ ಪುಸ್ತಕವನ್ನು ಸಿಇಒ ಪಿ.ಶಿವಶಂಕರ್ ಬಿಡುಗಡೆ ಮಾಡಿದರು. ಸಾಲ ವಾರ್ಷಿಕ ಯೋಜನೆಯಡಿ 2,628.41 ಕೋಟಿ ಗುರಿ ಹೊಂದಿದ್ದು ಕೃಷಿ ವಲಯಕ್ಕೆ 1,652.25 ಕೋಟಿ ಮತ್ತು ಉದ್ಯಮ ವಲಯಕ್ಕೆ 480.18 ಕೋಟಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net