

ಬಾಳೆಹೊನ್ನೂರು: ಪಟ್ಟಣದ ಪಿಎಸಿಎಸ್ 2024-25ನೇ ಸಾಲಿನಲ್ಲಿ 40 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ವೆಂಕಟೇಶ್ ತಿಳಿಸಿದರು.
ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ಸಂಘ ಸಾಲ ವಸೂಲಾತಿಯಲ್ಲೂ ಶೇ.100 ಸಾಧನೆ ಮಾಡಿದೆ. ಗೊಬ್ಬರ ಸಾಲ ನೀಡುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸಂಘದಿಂದ ಇನ್ನಷ್ಟು ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶವಿದೆ ಎಂದರು.
ನಿರ್ದೇಶಕ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಯುವಜನರು ರಾಷ್ಟ್ರೀಕತ ಬ್ಯಾಂಕ್‌ಗಳತ್ತ ವಾಲುತ್ತಿದ್ದಾರೆ. ಅಲ್ಲಿ ಹೆಚ್ಚು ಮೊತ್ತದ ಸಾಲ ಸಿಗುತ್ತಿದೆ. ಹಿರಿಯರು ಶ್ರಮವಹಿಸಿ ಒಂದೊಂದು ರೂಪಾಯಿಯನ್ನೂ ಕೂಡಿಸಿ ಇಂಥ ಸಂಘಗಳನ್ನು ಅಭಿವದ್ಧಿಯತ್ತ ತಂದಿದ್ದಾರೆ. ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಾಜಕೀಯ ಬರಬಾರದು ಎಂದು ಹೇಳಿದರು.
ಮಾಜಿ ಅಧ್ಯಕ್ಷ ಎಂ.ಕೆ.ಸುಂದರೇಶ್ ಮಾತನಾಡಿ, ಹೊಸ ತಲೆಮಾರಿನ ರೈತರು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆಯಲು ಮುಂದೆ ಬರುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಹೊಸದಾಗಿ ರೈತರು ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಚ್.ಯು.ಮಿನುಗು, ಎಂ.ಎಸ್.ಧಾತ್ರಿ, ಸಿರಿ ಸೋಮೇಶ್‌ಗೌಡ, ಜನ್ಮಿಕಾ, ವಿವನ್ ಮಸ್ಕರೇನ್ಹಸ್, ಧನ್ವಿತಾ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಎ.ಆರ್.ಋತ್ವಿ, ವಿ.ಯು.ಆಚಲ್ ಅವರನ್ನು ಪುರಸ್ಕರಿಸಲಾಯಿತು. ಸಂಘದ ಮಾಜಿ ನಿರ್ದೇಶಕರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಕೋಕಿಲಮ್ಮ, ನಿರ್ದೇಶಕ ಕೆ.ಟಿ.ವೆಂಕಟೇಶ್, ಎಂ.ಎಸ್.ಅರುಣೇಶ್, ಕೆ.ಕೆ.ಗೌತಮ್, ಎಚ್.ಡಿ.ಸತೀಶ್, ಕೆ.ಕೆ.ಆಶಾ, ಮಹಮ್ಮದ್ ಜುಹೇಬ್, ಸಿ.ವಿ.ಸುನೀಲ್, ಎಂ.ಡಿ.ಕಷ್ಣಪ್ಪ, ಕೆ.ಆರ್.ಸತೀಶ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಸ್.ಪಿ.ಪದ್ಮನಾಭ, ಸಿಇಒ ಎಚ್.ಉಮೇಶ್, ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಡಿ.ರಾಜೇಂದ್ರ, ಜಿ.ಅಣ್ಣಪ್ಪ, ಎಸ್.ಸತೀಶ್, ಕೆ.ಜೆ.ಚಿರಾಗ್, ಆರ್.ಕಿಶೋರ್, ಸಿ.ಪಿ.ಪ್ರಮೀತ್ ಇತರರಿದ್ದರು.