

ಮಳವಳ್ಳಿ: ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ನಮ್ಮ ಬ್ಯಾಂಕ್‌ಗೆ ರಾಜ್ಯ ಕಾಸ್‌ಕಾರ್ಡ್ ಬ್ಯಾಂಕ್ ಜಿಲ್ಲೆಗೆ ಎರಡನೇ ಸ್ಥಾನ ನೀಡಿ ಗೌರವಿಸಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಎಸ್.ಶಿವಮಲ್ಲಪ್ಪ ತಿಳಿಸಿದರು.
ಪಟ್ಟಣದ ಬ್ಯಾಂಕ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್‌ನ ಸರ್ವ ಸದಸ್ಯರ ಮಾಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ಪಡೆದ ಬಹುಪಾಲು ಷೇರುದಾರರು ಮರುಪಾವತಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರೆತಿದೆ. ಪ್ರಸ್ತುತ ವರ್ಷ 3.88 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಹೊಸದಾಗಿ ಷೇರುದಾರರ ನೋಂದಣಿ ಮಾಡಲಾಗುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷೆ ಲಕ್ಷ್ಮೀ, ನಿರ್ದೇಶಕರಾದ ಎಂ.ವಿ.ಮಾಯಣ್ಣ, ಶಿವರಾಜು, ರಮೇಶ್, ನಿಂಗಯ್ಯ, ರತ್ನಮ್ಮ, ಬಸವರಾಜು, ದೊಡ್ಡಮಾದೇಗೌಡ, ಪ್ರಸನ್ನ, ಸುರೇಶ್, ರಮ್ಯಾ, ಅಪ್ಪಾಜಿಗೌಡ, ಪ್ರಭಾರ ವ್ಯವಸ್ಥಾಪಕ ಎಂ.ಬಿ.ರಾಜೇಶ್ ಇದ್ದರು.
ಗಯ್ಯ, ರತ್ನಮ್ಮ, ಬಸವರಾಜು, ದೊಡ್ಡಮಾದೇಗೌಡ, ಪ್ರಸನ್ನ, ಸುರೇಶ್, ರಮ್ಯಾ, ಅಪ್ಪಾಜಿಗೌಡ, ಪ್ರಭಾರ ವ್ಯವಸ್ಥಾಪಕ ಎಂ.ಬಿ.ರಾಜೇಶ್ ಇದ್ದರು.