

ಹುಮನಾಬಾದ್: ರೈತರ ಸಾಲ ಮನ್ನಾ, ಬರ ಘೋಷಣೆ, ಬರಪರಿಹಾರ ಸೇರಿ ಇತರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘ ತಾಲೂಕು ಘಟಕದಿಂದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದು, ಕೂಡಲೇ ಸಹಾಯ ಮಾಡಬೇಕು. ಬ್ಯಾಂಕ್‌ಗಳಿAದ ರೈತರ ಸಾಲ ವಸೂಲಿ ತಡೆಯಬೇಕು, ರೈತರ ವಿರುದ್ಧದ ದಾವೆಗಳನ್ನು ಹಿಂಪಡೆಯಬೇಕು, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾಗಿದ್ದು, ಎಕರೆಗೆ ೨೫ ಸಾವಿರ ರೂ. ಪರಿಹಾರ ಕೊಡಬೇಕು, ಬೀದರ್ ಜಿಲ್ಲಾ ಬರ ಪೀಡಿತ ಜಿ¯್ಲೆ ಎಂದು ಘೋಷಿಸಬೇಕು, ವಿಮೆ ಕಂಪನಿಯಿAದ ರೈತರಿಗೆ ಬೆಳೆ ವಿಮೆ ಕೊಡಿಸಬೇಕು, ಕ್ವಿಂಟಾಲ್ ತೊಗರಿಗೆ ೧೦ ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು, ಟನ್ ಕಬ್ಬಿಗೆ ೩,೫೦೦ ರೂ. ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಂಡ್ಯ ಮೈ ಸುಗರ್ ಫ್ಯಾಕ್ಟರಿಗೆ ೫೦ ಕೋಟಿ ರೂ. ಅನುದಾನ ನೀಡಿದಂತೆ, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಗೂ ಅನುದಾನ ನೀಡಬೇಕು, ಸರಿಯಾಗಿ ವಿದ್ಯುತ್ ಪೂರೈಸಬೇಕು. ಎಲ್ಲ ಬೇಡಿಕೆ ಈಡೇರಿಸದಿದ್ದರೆ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಮನವಿ ಪತ್ರವನ್ನು ಗ್ರೇಡ್ ೨ ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಭಾಲ್ಕಿ, ಉಪಾಧ್ಯಕ್ಷ ಕರಬಸಪ್ಪ ಹುಡಗಿ, ತಾಲೂಕು ಅಧ್ಯಕ್ಷ ಮುಖಿಮೋದ್ದಿನ್ ಪಟೇಲ್ ಇತರರಿದ್ದರು.