ಸಾಲ ಪಡೆದು ಆರ್ಥಿಕವಾಗಿ ಸಬಲರಾಗಲಿ

10ckd1
Published on

ಚಿಕ್ಕೋಡಿ: ಹಳ್ಳಿಯಲ್ಲಿರುವ ಸ್ವಸಹಾಯ ಸಂಘಗಳಿಂದ ರೈತರು ಸಾಲ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕೆನರಾ ಬ್ಯಾಂಕ್ ಬೆಂಗಳೂರು ವಿಭಾಗದ ಜಿಎಂ ಪಿಸಿ ವರ್ಟಿಕಲ್ ಮುಖ್ಯಸ್ಥೆ ಮಮತಾ ಜೋಶಿ ಹೇಳಿದರು.

ತಾಲೂಕಿನ ಕೇಶವ ಕಲಾಭವನದಲ್ಲಿ ಕೆನರಾ ಬ್ಯಾಂಕ್ ನಬಾರ್ಡ್ ಹಾಗೂ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೆನರಾ ಬ್ಯಾಂಕ್ ಕೃಷಿ ಮತ್ತು ಸ್ವಸಹಾಯ ಸಂಘಗಳ ಕ್ರೆಡಿಟ್ ಲಿಂಕೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹುಬ್ಬಳ್ಳಿ ವಲಯದ ಪ್ರಬಂಧಕ ವೀರೇಂದ್ರ ಬಾಬು ಮಾತನಾಡಿದರು. ಕಬ್ಬು ಕಟಾವು ಯಂತ್ರ, ಗಾಣದ ಪ್ಯಾಕ್ಟರಿ, ವಿವಿಧ ಯಂತ್ರೋಪಕರಣ ಹಾಗೂ ಸ್ವ-ಸಹಾಯ ಸಂಘಗಳಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯದ ಚೆಕ್ ವಿತರಿಸಲಾಯಿತು. ಹುಬ್ಬಳ್ಳಿ ಕಚೇರಿಯ ಎಸ್.ಕೆ.ವಿಮಲ, ಸುಜಲ ಪ್ರಶಾಂತ, ತಾಪಂ ಸ್ಟೇಟ್ ಅಕೌಂಟೆಂಟ್ ಮೈಗೂರ ಉಪಸ್ಥಿತರಿದ್ದರು. ಚಿಕ್ಕೋಡಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ಪ್ರಬಂಧಕ ಎಂ.ಪನಿಶಯಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕೋಡಿ ಕೆನರಾ ಪ್ರಾದೇಶಿಕ ಕಚೇರಿಯ ಜಿಎಂ ರೇಣುಕಾ ಜಿ.ಸ್ವಾಗತಿಸಿದರು. ಅಂದಾನಿ ಪ್ರಸನ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net