ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಿರಿ

19TLR1-Web
ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ ಕರೊನಾ ಲಸಿಕೆ ಪಡೆದುಕೊಂಡರು. ಮಲ್ಲಮ್ಮ ನೇಸರಗಿ, ವಿ.ಎಸ್.ಯರಗುದ್ರಿ, ವೀರೇಶ ದೇಮಶಟ್ಟಿ, ಎ.ವಿ.ಇಂಗಳೆ ಇದ್ದರು.
Published on

ತಲ್ಲೂರ: ದೇಶದಲ್ಲಿ ದಿನೇ ದಿನೇ ಕರೊನಾ ಎರಡನೆ ಅಲೆ ಹೆಚ್ಚುತ್ತಿದ್ದು, 45 ವರ್ಷ ಮೇಲ್ಪಟ್ಟವರು ತಪ್ಪದೆ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ ಮನವಿ ಮಾಡಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕೋವಿಡ್ 19 ಲಸಿಕೆ ಪಡೆದುಕೊಂಡು ಮಾತನಾಡಿದ ಅವರು, ವಿಶ್ವ ಹಾಗೂ ದೇಶಾದ್ಯಂತ ಕೋವಿಡ್ 2ನೇ ಅಲೆ ಆರಂಭವಾಗಿದೆ. ಕಾರಣ ಎಲ್ಲರೂ ಜಾಗೃತರಾಗಿ ಇರುವುದರ ಜತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು.

ನಿರ್ಲಕ್ಷೃತನದಿಂದ ಮಾರಕ ರೋಗಕ್ಕೆ ತುತ್ತಾಗದಿರಿ. ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಅತ್ಯಂತ ಸುರಕ್ಷಿತ ಹಾಗೂ ಕರೊನಾ ಮಣಿಸಲು ಅಗತ್ಯವಿರುವ ಈ ಲಸಿಕೆ ಪಡೆದು ಭಾರತವನ್ನು ಕರೊನಾ ಮುಕ್ತವಾಗಿಸಿ ಎಂದು ಸಾರ್ವಕನಿಕರಿಗೆ ಮನವಿ ಮಾಡಿದರು.

ವೈದ್ಯಾಧಿಕಾರಿ ಮಲ್ಲಮ್ಮ ನೇಸರಗಿ, ಹಿರಿಯ ಪುರುಷ ಆರೋಗ್ಯ ಸಹಾಯಕ ವಿ.ಎಸ್.ಯರಗುದ್ರಿ, ಶುಶ್ರೂಷಾಧಿಕಾರಿ ವೀರೇಶ ದೇಮಶಟ್ಟಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಅನಿಲಕುಮಾರ ದೇಸಾಯಿ, ಆರತಿ ಹೊಳ್ಳಿಕೇರಿ, ಶಿಕ್ಷಕ ಎ.ವಿ.ಇಂಗಳೆ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net