ಹಂಚಿಕೆಯಲ್ಲಿ ರೋಸ್ಟರ್ ಪದ್ದತಿ ಪಾಲಿಸಲಾಗುತ್ತಿದ್ದು ಪರಿಶಿಷ್ಟಜಾತಿ, ಪರಿಶಿಷ್ಟವರ್ಗ, ಹಿಂದುಳಿದವರ್ಗ, ವಿಶೇಷಚೇತನರು, ಸೈನಿಕರು, ಇನ್ನಿತರ ವರ್ಗಗಳು, ಸಾಮಾನ್ಯ ವರ್ಗದವರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಸತಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ನಿವೇಶನಗಳನ್ನು ೩ರಿಂದ ೪ ತಿಂಗಳೊಳಗೆ ನೀಡಲಿದ್ದೇವೆ. ಸಾರ್ವಜನಿಕರು ನಗರಾಭಿವೃದ್ದಿ ಪ್ರಾಧಿಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನಗರದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.