ಸಾರ್ವಜನಿಕರಿಂದ ಉತ್ತಮ ಸ್ಪಂದನೆ

oplus_131074
ಹುಮನಾಬಾದ್ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶನಿವಾರ ಮನೆ-ಮನೆಗೆ ಪೊಲೀಸ್ ಭೇಟಿ ಭಿತ್ತಿ ಪತ್ರವನ್ನು ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡರ ಬಿಡುಗಡೆಗೊಳಿಸಿದರು. ಸಿಪಿಐ ಗುರು ಪಾಟೀಲ, ಪಿಎಸ್‌ಐಗಳಾದ ಸುರೇಶ ಚವ್ಹಾಣ್, ಸವಿತಾ ಪ್ರಿಯಾಂಕ, ಹುಲೆಪ್ಪ ಇದ್ದರು.
Published on

ಹುಮನಾಬಾದ್: ಮನೆಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡರ ಹೇಳಿದರು.

ಪಟ್ಟಣದ ಪೊಲೀಸ್ ಉಪಾಧೀಕ್ಷಕ ಕಚೇರಿಯಲ್ಲಿ ಶನಿವಾರ ಮನೆ-ಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಟ್ ಪೊಲೀಸರು ಗ್ರಾಮಗಳಲ್ಲಿನ ಪ್ರತಿ ಮನೆಮನೆಗೆ ತೆರಳಿ ಆ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಕುಟುಂಬದವರಿಂದ ಲಿಖಿತ ಅಥವಾ ಮೌಖಿಕವಾಗಿ ದೂರು ಪಡೆಯಬೇಕು. ಸಾಧ್ಯವಾದಷ್ಟು ಅಲ್ಲಿಯೇ ಪರಿಹಾರಿಸಬೇಕು. ಗಂಭೀರ ವಿಷಯಗಳಿದ್ದಲ್ಲಿ ಮೇಲಧಿಕಾರಿ ಗಮನಕ್ಕೆ ತರಬೇಕು ಎಂದರು.

ಮಹಿಳೆಯರ, ಮಕ್ಕಳ ಸುರಕ್ಷತೆ, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ಭಿಕ್ಷಾಟನೆ ಸೇರಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಂಘ, ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿ ಹೇಳಬೇಕು. ಪೊಲೀಸ್ ಇಲಾಖೆಯೊಂದಿಗೆ ಗ್ರಾಮಸ್ಥರು ಸಹ ಸಹಕರಿಸುವ ಮೂಲಕ ಕಾನೂನು ಬಾಹೀರ ಚಟವಟಿಕೆ, ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದರು.

ಸಿಪಿಐ ಗುರು ಪಾಟೀಲ, ಪಿಎಸ್‌ಐಗಳಾದ ಸುರೇಶ ಚವ್ಹಾಣ್, ಸವಿತಾ ಪ್ರಿಯಾಂಕ, ಹುಲೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net