

ಹೊಳೆನರಸೀಪುರ: ಸರ್ಕಾರಿ ಸೇವೆಯಲ್ಲಿರುವ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರವಿದ್ದರೆ ಕರ್ತವ್ಯ ನಿಷ್ಠೆಯಿಂದ ಪ್ರಾಮಾಣಿಕ ಸೇವೆ ಮಾಡಬಹುದು ಎಂದು ತಾಲೂಕು ದಂಡಾಧಿಕಾರಿ ಕೇಕೆ ಕೃಷ್ಣಮೂರ್ತಿಯವರು ಹೇಳಿದರು.
ತಾಲೂಕು ಆಡಳಿತದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಕಚೇರಿಯ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಾರ್ವಜನಿಕರ ಸೇವೆ ಮಾಡಿದ ಕುರಿತು ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದರು .
ತಾಲೂಕು ಕಚೇರಿಯಲ್ಲಿ ನನಗೆ ಸಾಕಾರ ನೀಡಿದಂತೆ ಹೊಸದಾಗಿ ಅಧಿಕಾರ ಸ್ವೀಕರಿಸುತ್ತಿರುವ ದಂಡಾಧಿಕಾರಿಗಳಿಗೂ ಸಹ ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡಬೇಕೆಂದು ಕಚೇರಿಯ ಸಿಬ್ಬಂದಿಗಳೊಂದಿಗೆ ಮನದಾಳದ ಮಾತುಗಳನ್ನಾಡಿದರು. ಈ ತಾಲೂಕಿಗೆ ತಾನು ಎರಡನೇ ಅಲೆಯ ಕೋವಿಡ್ ಸಂದರ್ಭದಲ್ಲಿ ದಂಡಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿ ಇಂದಿಗೆ ಎರಡು ವರ್ಷಗಳು ಸಮೀಪಿಸುತ್ತಿದೆಎಂದರು. ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಚುನಾವಣೆ ಆಯೋಗ ಸಾಮಾನ್ಯ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಅದರಂತೆ ತಾವು ಬೇರೆಡೆಗೆ ತೆರಳಬೇಕಿದೆ. ಇಲ್ಲಿನ ಜನ ಪ್ರತಿನಿಧಿಗಳ ಪತ್ರಕರ್ತರ ಸಿಬ್ಬಂದಿಗಳ ಸಹಕಾರದೊಂದಿಗೆ ಈ ತಾಲೂಕಿನಲ್ಲಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿತ್ತು ನನ್ನ ಅವಧಿಯಲ್ಲಿ ಇರುವವರೆಗೆ ಉತ್ತಮವಾಗಿ ಸಾರ್ವಜನಿಕರ ಸೇವೆ ಮಾಡಿರುವುದು ತೃಪ್ತಿ ತಂದಿದೆ ಎಂದರು.
ಕೋವಿಡ್ 19 ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸಹಕಾರ ನೀಡಿದ್ದ ಹಿನ್ನೆಲೆಯಲ್ಲಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಕೊರೊನಾ ಸಾಂಕ್ರಿಮಿಕ ರೋಗಕ್ಕೆ ತುತ್ತಾದವರನ್ನು ಆರೋಗ್ಯವಂತರನ್ನಾಗಿ ಮಾಡಿದ್ದ ಕೀರ್ತಿ ಎಲ್ಲರಿಗೂ ಸಲ್ಲುತ್ತದೆ. ಆರರಿಂದ ಏಳು ತಿಂಗಳವರೆಗೆ ಕೋವಿಡ್ ಜೊತೆ ಸೆಣಸಾಟ ಮಾಡಿದ್ದೇವೆ ಇದನ್ನು ಹಿಮ್ಮೆಟ್ಟಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಅರ್ಪಿಸುವುದಾಗಿ ಹೇಳಿದರು.
ತಾಲೂಕಿನಲ್ಲಿ ಹತ್ತಾರು ವರ್ಷದಿಂದ ನೆಲಗುದಿಗೆ ಬಿದ್ದಿದ್ದ ಹಕ್ಕು ಬದಲಾವಣೆ ನೋಂದಣಿ ಕಾರ್ಯ ದಸ್ತಾವೇಜು ಪೋತಿ ಖಾತೆ ಎಲ್ಲವನ್ನು ಸರಿಪಡಿಸಿದ್ದೇವೆ ನಾನು ತಾಲೂಕಿನಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಇನ್ನೂರ ಐವತ್ತರಿಂದ ಮುನ್ನೂರರಷ್ಟು ತಕರಾರು ಕಡತಗಳು ಬಾಕಿ ಇದ್ದವು ಸರಿ ಸುಮಾರು ಆರರಿಂದ ಏಳು ವರ್ಷಗಳಿಂದಲೂ ಮುಂದೂಡಿಕೊಂಡು ಹೋಗುತ್ತಿದ್ದರು ಆದರೆ ನಾನು ಬಂದ ಬಳಿಕ 250 ರಿಂದ 300 ಕಳೆತಗಳನ್ನು ಸಹ ವಾರಕ್ಕೆ ಎರಡು ದಿನ ಕೋರ್ಟ್ ನಲ್ಲಿ ತೆಗೆದುಕೊಂಡು ದಂಡಾಧಿಕಾರಿಗಳ ಅಧ್ಯಯನದಲ್ಲಿಯೇ ತೀರ್ಮಾನ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೆ ಸರ್ಕಾರದ ಆದೇಶದಂತೆ ಸಕ್ರಮ ಮಾಡಿಕೊಟ್ಟಿದ್ದೇವೆ. ಸುಮಾರು 1400 ರಷ್ಟು 94 ಸಿ ಅಡಿಯಲ್ಲಿ ಬರುವ ಹಕ್ಕುಪತ್ರಗಳನ್ನು ಬೃಹತ್ ಸಮಾವೇಶ ನಡೆಸಿ ಸಕ್ರಮ ಮಾಡಿಕೊಟ್ಟಿದ್ದೇವೆ ಮಾನ್ಸೂನ್ ಮಳೆ ಯಾಗದ ಪರಿಣಾಮ ಅಕಾಲಿಕ ಮಳೆಗೆ ತುತ್ತಾಗಿ ಶಿಥಿಲಗೊಂಡು ನಾಶವಾಗಿದ್ದ ಮನಗಳಿಗೆ ಪರಿಹಾರ ಕೊಡಿಸುವಲ್ಲಿ ಅವಿರತಶ್ರಮ ಹಾಕಿದ್ದೇವೆ ಅದರಲ್ಲೂ ಹಳ್ಳಿ ಮೈಸೂರು ಹೋಬಳಿಯಲ್ಲಿ ಮನೆಗಳು ಅತಿ ಹೆಚ್ಚು ಕುಸಿದು ಬೀಳುತ್ತಿದ್ದವು 1600 ಮನೆಗಳಿಗೆ ಪರಿಹಾರ ನೀಡಿದ್ದೇವೆ ತಾಲೂಕಿನಲ್ಲಿ ಅಕ್ರಮವಾಗಿ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರು ನಮೂನೆ 53 ರಲ್ಲಿ ಅರ್ಜಿ ಸಲ್ಲಿಸಿ ದವರಿಗೆ ಸುಮಾರು 480 ರಷ್ಟು ಅರ್ಜಿಗಳನ್ನು ಸಭೆಯಲ್ಲಿ ಮಂಡಿಸಿ ಕಾನೂನು ರೀತಿ ಮಂಜೂರು ಮಾಡಿಕೊಟ್ಟಿದ್ದೇವೆ ಎಂದು ನುಡಿದರು. ಹೊಳೆನರಸೀಪುರದ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳ ನೇತೃತ್ವದಲ್ಲಿ 50 ಫಲಾನುಭವಿಗಳಿಗೆ ಬಗರ್ ಹುಕುಂ ಸಮಿತಿಯಲ್ಲಿಟ್ಟು ಮಂಜೂರು ಮಾಡಿಕೊಟ್ಟಿದ್ದೇವೆ ತಾಲೂಕಿನಲ್ಲಿ ಕಪ್ಪು ಚುಕ್ಕಿಯಾಗಿದ್ದ ಹಾಗೂ ಈ ಹಿಂದೆ ಸೇವೆ ಸಲ್ಲಿಸಿದ್ದ ಕಾಡಯ್ಯ ಅವರ ಅವಧಿಯಲ್ಲಿ ಆಗಿರುವ ಗೊಂದಲಗಳ ಅರ್ಜಿಗಳನ್ನು ಸಹ ಸರಿಪಡಿಸಿದ್ದೇವೆ ಎಂದರು
ಸರ್ಕಾರಿ ಜಮೀನು ಒತ್ತುವರಿ ನಿಗಮ ಆದೇಶದ ಪ್ರಕಾರ ಒಂದು ವರ್ಷ ಸತತವಾಗಿ 537 ಕಡತಗಳನ್ನು ಸರ್ವೆ ಮಾಡಿ ಉಪ ವಿಭಾಗಾಧಿಕಾರಿಗಳಿಗೆ ಮಂಡನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದೇನೆ 11 ವರ್ಷದಿಂದ ನೆಲಗುದಿಗೆ ಬಿದ್ದಿದ್ದ 212 ಪ್ರಕರಣಗಳನ್ನು ಇತ್ಯರ್ಥ ಮಾಡಿ ಸಕ್ರಮ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಅಧಿಕಾರ ಸ್ವೀಕರಿಸಿದ ವಿಶ್ವನಾಥ್ ಉಪ ತಹಶೀಲ್ದಾರ್ ಗಳಾದ ಬಿ ಎಸ್ ರವಿಕುಮಾರ್ ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.