ಸಾರ್ವಜನಿಕ ಸೇವೆಗೆ ಪೊಲೀಸ್ ಇಲಾಖೆ ಸಿದ್ಧ, ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಸಜ್ಜೀತ್ ಅಭಿಮತ

31 Nela ph 02 Jana Samparka Sabe udgatane
Published on

ನೆಲಮಂಗಲ: ದಿನದ 24ಗಂಟೆ ವರ್ಷದ 365 ದಿನಗಳ ಕಾಲ ಸಾರ್ವಜನಿಕ ಸೇವೆಗೆ ಪೊಲೀಸ್ ಇಲಾಖೆ ಸಿದ್ಧವಿದ್ದು ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಸಜ್ಜೀತ್ ತಿಳಿಸಿದರು.

ಪಟ್ಟಣದ ಎಸ್‌ಎಲ್‌ಆರ್ ಸಮುದಾಯಭವನದಲ್ಲಿ ಪೊಲೀಸ್ ಉಪವಿಭಾಗದಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಶುಕ್ರವಾರ ಆಯೊಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಜನಸ್ನೇಹಿಯಾಗಿ ಸಂಪೂರ್ಣ ಬದಲಾಗಿರುವ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಹಿತರಕ್ಷಣೆಯಾಗುತ್ತಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಬೀಟ್ ವ್ಯವಸ್ಥೆ ಸುಧಾರಣೆ ಮಾಡಲಾಗಿದೆ. ಮುಂದಿನ 15 ದಿನಗಳ ಒಳಗಾಗಿ ಬೀಟ್ ವ್ಯಾಪ್ತಿಯಲ್ಲಿ ಪ್ರಮುಖ 50 ನಿವಾಸಿಗಳ ಒಳಗೊಂಡ ವ್ಯಾಟ್ಸಾಪ್‌ಗ್ರೂಪ್ ರಚಿಸಿಕೊಳ್ಳಬೇಕು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರ ಒದಗಿಸು ಜತೆಗೆ ಸಲಹೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಬಗ್ಗೆ ಭಯಪಡುವುದು ಬೇಡ, ಸಮಸ್ಯೆಗಳಿದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದರು.

ಡಿವೈಎಸ್‌ಪಿ ಮೋಹನ್‌ಕುಮಾರ್ ಮಾತನಾಡಿ, ನಗರ ಪ್ರದೇಶದಲ್ಲಿ ಅಷ್ಟೆ ಅಲ್ಲ, ಎಲ್ಲೆಡೆ ಹೆಲ್ಮೆಟ್ ಕಡ್ಡಾಯವಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ಅವಕಾಶ ಕೊಡುವುದಿಲ್ಲ. ನಗರ ಹೊರವಲಯದ ರಸ್ತೆಗಳಲ್ಲಿ ಬೀದಿದೀಪಗಳ ನಿರ್ವಹಣೆ ಮಾಡಿ ಸಂಭವಿಸಬಹುದಾದ ಅಪರಾಧ ಪ್ರಕರಣಗಳನ್ನು ತಪ್ಪಿಸಬಹುದಾಗಿದೆ, ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು.

ಸಾರ್ವಜನಿಕ ಮನವಿ: ಠಾಣೆಗಳಿಗೆ ದೂರು ನೀಡಲು ಬರುವ ಮಹಿಳೆಯರ ಜತೆ ಜವಬ್ದಾರಿಯಿಂದ ನಡೆದುಕೊಳ್ಳವುದು, ಪ್ರತ್ಯೇಕ ಮಹಿಳಾ ಪೊಲೀಸ್‌ಠಾಣೆ ತೆರೆಯವುದು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಓಬವ್ವ ಮಹಿಳಾ ಪೊಲೀಸ್ ಪಡೆ ನಿಯೋಜಿಸುವುದು, ಮಾಧಕ ವಸ್ತುಗಳ ಮಾರಾಟ ಜಾಲ ಪತ್ತೆಗೆ ಕ್ರಮಕೈಗೊಳ್ಳುವುದು ಸೇರಿ ಗ್ರಾಮೀಣ ಪ್ರದೇಶದಲ್ಲಿ ಹೆಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮದ್ಯಮಾರಾಟ ಸಭೆಯಲ್ಲಿ ಪ್ರತಿಧ್ವನಿಸಿತು.

ಡಿವೈಎಸ್‌ಪಿ ಮೋಹನ್‌ಕುಮಾರ್, ವೃತ್ತನಿರೀಕ್ಷಕ ಶಿವಣ್ಣ, ಎಸ್‌ಐ ಅಂಜನ್‌ಕುಮಾರ್, ಡಿ.ಆರ್.ಮಂಜುನಾಥ್, ಕೃಷ್ಣಕುಮಾರ್, ಸಂಚಾರಿ ಠಾಣೆ ಇನ್‌ಸ್ಪೆಕ್ಟರ್ ಎಸ್.ಆರ್.ವೀರೇಂದ್ರಪ್ರಸಾದ್, ಎಸ್‌ಐ ಮೋಹನ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net