ಸಾರ್ವಜನಿಕ ಶೌಚಗೃಹಗಳ ಪರಿಶೀಲನೆ

CTD 24 M.VIJAY--10
Published on

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅವರು ಶುಕ್ರವಾರ ನಗರದ ವಿವಿಧೆಡೆ ಇರುವ ಸಾರ್ವಜನಿಕ ಶೌಚಗೃಹಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು.
ಸಂತೆಹೊಂಡ ಸಮೀಪ, ಖಾಸಗಿ ಬಸ್‌ನಿಲ್ದಾಣ ಶೌಚಗೃಹಗಳಿಗೆ ಧಿಡೀರ್ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದೆ ದುರ್ವಾಸನೆಯಿಂದ ಕೂಡಿರುವ ಶೌಚಗೃಹಗಳನ್ನು ನೋಡಿ ಗರಂ ಆದರು. ಸ್ವಚ್ಛತೆ ಕಾಪಾಡಲು ನಗರಸಭೆ ವಿಫಲವಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿದರೆ ಕರೆ ಸ್ವೀಕರಿಸಿರುವುದಿಲ್ಲವೆಂದು ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net