!ಸಾರ್ವಜನಿಕ ಆಸ್ಪತ್ರೆಗೆ ಎಸಿ ಧೀಡಿರ್ ಭೇಟಿ

10Anand7
Published on

!ಸಾರ್ವಜನಿಕ ಆಸ್ಪತ್ರೆಗೆ ಎಸಿ ಧೀಡಿರ್ ಭೇಟಿ

ವಿಜಯವಾಣಿ ಸುದ್ದಿಜಾಲ,ಚಿಕ್ಕೋಡಿ

ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ಒಂದು ವೇಳೆ ರೋಗಿಗಳಿಗೆ ತೊಂದರೆಯಾದರೇ ನಾವು ಸುಮ್ಮನಿರುವುದಿಲ್ಲ. ನಿರ್ಧಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದಲ್ಲಿರುವ ಸಾರ್ವಜನಿಕ ಆಸತ್ರೆಗೆ ಮಂಗಳವಾರ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಔಷದಿಗಳು ಮತ್ತು ಚುಚ್ಚುಮದ್ದು ಸರಿಯಾಗಿ ಪೂರೈಕೆಯಾಗುತ್ತಿರುವುದರ ಬಗ್ಗೆ ವೈದ್ಯರು ಗಮನ ನೀಡಬೇಕು,

ಆಸ್ಪತ್ರೆಯ ನವೀಕರಣ ಕಾಮಗಾರಿ ನಡೆದಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಸರಿಯಾಗಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಏನೇ ತೊಂದರೆ ಅಥವಾ ಯಾವುದೇ ಔಷಧಿ ಕೊರತೆ ಇದ್ದರೆ ತಿಳಿಸಿ, ಸರ್ಕಾರದಿಂದ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ ನಾಗರಬೆಟ್ಟ,ಡಾ.ಸಚೀನ ಬಾಕರೆ, ಡಾ. ವಿಶಾಲ ಹಡಪದ, ಡಾ. ಹಿದಾಯತವುಲ್ಲಾ ಪಠಾಣ,ಡಾ. ಕಾವೇರಿ ಉಪ್ಪೆ, ಡಾ. ರೂಪಾ ಅಗಸಿಮನಿ, ಡಾ. ಜ್ಯೋತಿ ಚಿತಳೆ,ಡಾ. ಶಿಲ್ಪಾ, ಡಾ. ಸಂಗೀತಾ, ಶುಶೂಷಕ ಅಧೀಕ್ಷಕ ಮೇಘಾ ಕಾಂಬಳೆ, ರಮೇಶ ದೊಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net