

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಸಮೀಪದ ಹಿಂದೂ ಮಹಾಗಣಪತಿಯ ೧೨ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಬುಧವಾರ ಬೆಳಗ್ಗೆ ಶ್ರೀಯವರಿಗೆ ಗಣಹೋಮ ನಡೆಸಲಾಯಿತು. ಮಧ್ಯಾಹ್ನ ೧೨.೩೦ಕ್ಕೆ ರಂಗಣ್ಣ ಸಮುದಾಯ ಭವನದಲ್ಲಿ ಸಾರ್ವಜನಿಕ ಅನ್ನ ಸಂಪರ್ತಣೆ ಕಾರ್ಯವು ನೆರವೇರಿತು.
ಸುಮಾರು ನಾಲ್ಕು ಸಾವಿರಕ್ಕೂ ಮಂದಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಶ್ರೀ ದುರ್ಗಾ ಕ್ಯಾಟರಿಂಗ್ ಗೆಳೆಯರ ಬಳಗ ಮತ್ತು ಸುಪ್ರೀಮ್ ಹಾರ್ಡ್ವೇರ್ ಸಂಸ್ಥೆ ವಹಿಸಿಕೊಂಡು ಅನ್ನದಾಸೋಹಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತಾಧಿಗಳು, ಸಾರ್ವಜನಿಕರು ನೂಕುನುಗ್ಗಲು ನಡೆಸದೇ ಸಾವದಾನವಾಗಿ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾನ್, ಶ್ಯಾಮ್.ವಿ.ಗೌಡ, ಸುನೀಲ್ ಆಚಾರ್ಯ, ಅಮೀತ್, ಕಿಶೋ ರ್, ಅಂಕಿತಾ, ನಯನ್, ಗೌತಮ್, ಆಕಾಶ್ ಮತ್ತಿತರರಿದ್ದರು.