ಸಾರಿಗೆ ಬಸ್ಗಳು ಖಾಲಿ ಖಾಲಿ…

buss
Published on


ಶಾಮಸುಂದರ ಕುಲಕರ್ಣಿ ಕಲಬುರಗಿ
ದಾವಣಗೆರೆ, ಖಾನಾಪುರಕ್ಕೆ ತಲಾ ಐವರು, ಹಾವೇರಿಗೆ ಎಂಟು, ಜಮಖಂಡಿಗೆ ಕೇವಲ ಆರು ಜನ. ಈಶಾನ್ಯ ಸಾರಿಗೆ ಸಂಸ್ಥೆ ಕಲಬುರಗಿ ನಿಲ್ದಾಣದಿಂದ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಬಸ್ಗಳಲ್ಲಿ ಪ್ರಯಾಣಿಸಿದವರ ಸಂಖ್ಯೆ ಇದು. ಒಂದು ಕಾಲದಲ್ಲಿ ಸಂಪೂರ್ಣ ಭರ್ತಿ ಪ್ರಯಾಣಿಕರಿಗೆ ನಿಲ್ಲಲೂ ಜಾಗ ಸಿಗುತ್ತಿರಲಿಲ್ಲ. ಆದರೀಗ ಕರೊನಾ ಭಯ ಖಾಲಿ ಖಾಲಿ ಹೊಡೆಯುವಂತೆ ಮಾಡಿದೆ. ಹೀಗಾಗಿ ಸಾರಿಗೆ ಸಂಸ್ಥೆ ಸೇವೆ ನೀಡುತ್ತಿದ್ದರೂ ನಷ್ಟ ಅನುಭವಿಸುವುದು ತಪ್ಪದಂತಾಗಿದೆ.
ಕ್ರಮೇಣ ಸಾರಿಗೆ ಸೇವೆ ಸುಧಾರಿಸಬಹುದು ಎಂಬ ಎನ್ಈಕೆಆರ್ಟಿಸಿ ಆಡಳಿತ ಮಂಡಳಿ ನಿರೀಕ್ಷೆ ಹುಸಿಯಾಗಿದೆ. ಯಾವುದೇ ಕಾರಣಕ್ಕೂ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿಲ್ಲ. ಬಳ್ಳಾರಿ ಮತ್ತು ಹುಬ್ಬಳ್ಳಿಗೆ ಪ್ರಯಾಣಿಸಿದವರ ಸಂಖ್ಯೆ ಕೇವಲ ತಲಾ ನಾಲ್ಕು. ಹಾಗಂತ ಸೇವೆ ನಿಲ್ಲಿಸಿಲ್ಲ. ಬಸ್ ಚಾಲಕ ಮತ್ತು ನಿವರ್ಾಹಕರು ಹಾಗೂ ಪ್ರಯಾಣಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ಬಸ್ಗಳಲ್ಲಿ 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ.
ಈಶಾನ್ಯ ಸಾರಿಗೆ ಸಂಸ್ಥೆಯು ಪ್ರತಿನಿತ್ಯ ಕಲಬುರಗಿಯಿಂದ ಬೆಂಗಳೂರಿಗೆ ನೂರಾರು ಬಸ್ಗಳನ್ನು ಓಡಿಸುತ್ತಿತ್ತು. ಶನಿವಾರ ಇಡೀ ದಿನ ಕೇವಲ ಒಂಬತ್ತು ಬಸ್ಗಳು 210 ಪ್ರಯಾಣಿಕರನ್ನು ಕೊಂಡೊಯ್ದಿವೆ. ಇದೆಲ್ಲ ಸಂಜೆ ಆರರೊಳಗಿನ ರಿಪೋರ್ಟ.
ಚಾಲಕ, ನಿರ್ವಾಹಕರಿಗೆ ದಿನಕ್ಕೊಂದು ಗುಣಮಟ್ಟದ ಮಾಸ್ಕ್ ವಿತರಿಸಲಾಗುತ್ತಿದೆ. ದೂರದ ಪ್ರಯಾಣ ಬೆಳೆಸುವ ಚಾಲಕ, ನಿರ್ವಾಹಕರಿಗೆ ಎರಡೆರಡು ಮಾಸ್ಕ್ ನೀಡಲಾಗುತ್ತಿದೆ ಎಂದು ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net