

ಸಾರಾಯಿ ನಶೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ!
ಚಿಕ್ಕೋಡಿ : ಕೀಟನಾಶಕ ಔಷಧಿ ಸೇವಿಸಿ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ವಿಲಾಸ ಮಾರುತಿ ತಳವಾರ (43 ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈತ ಸಾರಾಯಿ ಕುಡಿದ ನಶೆಯಲ್ಲಿ ಶನಿವಾರ ಮನೆಯಲ್ಲಿ ಬೆಳೆಗಳಿಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಔಷಧಿ ಸೇವಿಸಿದ್ದನು,ಚಿಕಿತ್ಸೆಗಾಗಿ
ಸಂಕೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ
ಬೆಳಗಿನ ಜಾವ ಮೃತ ಪಟ್ಟಿದ್ದಾನೆ.
ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.