ಸಾಯಿಬಾಬ ದೇವಾಲಯದಲ್ಲಿ ಟೈಮ್ಸ್ ಗುರುಕುಲ ಶಾಲೆಯಿಂದ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಚಾಲನೆ

ಸಾಯಿಬಾಬ ದೇವಾಲಯದಲ್ಲಿ ಟೈಮ್ಸ್ ಗುರುಕುಲ ಶಾಲೆಯಿಂದ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಚಾಲನೆ
Published on

ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಶ್ರೀ ಸಾಯಿಬಾಬ ದೇವಾಲಯದಲ್ಲಿ ಬುಧವಾರ ಟೈಮ್ಸ್ ಗುರುಕುಲ ಶಾಲೆ ವತಿಯಿಂದ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಗಣೇಶ ಮತ್ತು ಸರಸ್ಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಕ್ಷರಬ್ಯಾಸಕ್ಕೆ ಚಾಲನೆ ನೀಡಲಾಯಿತು.
ಶ್ರೀ ಶಿರಡಿ ಸಾಯಿ ಮಂದಿರದ ಕಾರ್ಯದರ್ಶಿ ಪ್ರಸಾದ್ ಮಾತನಾಡಿ, ಶ್ರೀ ಸಾಯಿಬಾಬ ದೇವಸ್ಥಾನ ಪ್ರಾರಂಭವಾದ ದಿನದಿಂದಲು ಇಂತಹ ಅಕ್ಷರಭ್ಯಾಸ ಕಾರ್ಯಕ್ರಮ ನಡೆದಿರಲಿಲ್ಲ. ಇದೊಂದು ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಮಕ್ಕಳ ಅಕ್ಷರಭ್ಯಾಸದಲ್ಲಿ ಪೋಷಕರು ಪಾಲ್ಗೊಂಡಿರುವುದು ಉತ್ತಮವಾಗಿದೆ. ಪ್ರತಿವರ್ಷ ಈ ದೇವಾಲಯದಲ್ಲಿ ವಾರ್ಷಿಕೋತ್ಸವ ನಡೆಸಲಾಗುತ್ತಿದ್ದು, ಈಗ ಒಳ್ಳೆ ಅವಕಾಶ ನಮಗೆ ಸಿಕ್ಕಿದೆ. ಇಲ್ಲಿಂದಲೇ ಮಕ್ಕಳ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಆಶಿಸಿದರು.
ಟೈಮ್ಸ್ ಗುರುಕುಲ ಶಾಲೆ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಪೋಷಕರು ನಮ್ಮ ಮಕ್ಕಳು ವೈದ್ಯರು ಇಲ್ಲದೇ ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಮಕ್ಕಳಿಗೆ ಯಾವ ರಂಗದಲ್ಲಿ ಆಸಕ್ತಿ ಇದೆ. ಅದನ್ನೆ ಪ್ರೋತ್ಸಹಿಸಿ. ಕ್ರೀಡೆ,
ನೃತ್ಯ, ಫಿಲಂ ಸೇರಿದಂತೆ ಇತರೆ ಯಾವುದೇ ಕ್ಷೇತ್ರದಲ್ಲಿ ಮಕ್ಕಳು ಬೆಳೆಯಲು ಉತ್ತಮ ಅವಕಾಶಗಳು ಇದ್ದು, ಪೋಷಕರು ಅವರಿಗೆ ನೆರವು ಆಗಬೇಕು ಎಂದು ಹೇಳಿದರು.
ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಯಂತ್ರಿಸಬೇಕು. ಇಂದಿನ ಮಕ್ಕಳಿಗೆ ಕೈಲಿ ಮೊಬೈಲ್ ಕೊಟ್ಟು ಊಟ ಮಾಡಬೇಕಾದ ಪರಿಸ್ಥಿತಿ ತಂದಿದ್ದೇವೆ. ಮನೆಯಲ್ಲಿ ಕಲಿತಿರುವುದರಿಂದ ಶಾಲೆಯಲ್ಲೂ ಕೂಡ ಮಕ್ಕಳು ಸ್ಮಾರ್ಟ್ ಟಿವಿ ಹಾಕಿದ ಮೇಲೆ ಊಟ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮೊಬೈಲ್ ಕೊಟ್ಟು ಊಟ ಮಾಡಿರುವುದು ಒಂದು ಕೆಟ್ಟ ಸಂಪ್ರದಾಯ ಕೂಡಲೇ ಕಡಿಮೆ ಮಾಡಬೇಕೆಂದು ಮನವಿ ಮಾಡಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಶಿರಡಿ ಸಾಯಿ ಮಂದಿರದ ಎಚ್.ಎಸ್. ನೀಲಕಂಠ, ಚಂದ್ರಶೇಖರ್, ಟೈಮ್ಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಪ್ರಾಂಶುಪಾಲೆ ಉಮಾ.ಎಸ್. ಪಾಟೀಲ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net