

ತೂಬಗೆರೆ: ನಮ್ಮ ಪಾಲಕರು ಮನೆ ಮುಂದೆ ದೇವರ ೆಟೋ ಇಟ್ಟು ನನ್ನ ಮದುವೆ ಮಾಡಿಸಿದ್ದರು. ಮುಂದಿನ ದಿನಗಳಲ್ಲಿ ನನ್ನ ಮೊಮ್ಮಕ್ಕಳಿಗೆ ಇಂಥ ಸಾಮೂಹಿಕ ವಿವಾಹದಲ್ಲೇ ಧಾರೆ ಎರೆದು ಕೊಡುತ್ತೇನೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಘಾಟಿ ಸುಬ್ರಹ್ಮಣ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ಬುಧವಾರ ಆಯೋಜಿಸಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂದಾದ 16 ಜೋಡಿ ದಂಪತಿಗೆ ಶುಭ ಹಾರೈಸಿ ಮಾತನಾಡಿದರು.
ಶ್ರೀಮಂತರು ಆಡಂಬರದೊಂದಿಗೆ ಮಕ್ಕಳ ಮದುವೆ ಮಾಡಿ, ದುಂದುವೆಚ್ಚ ಮಾಡುತ್ತಾರೆ. ಹಿಂದೆ ಈ ರೀತಿಯ ಆಡಂಬರಗಳಿಲ್ಲದೆ ಮದುವೆಗಳು ಆಗುತ್ತಿದ್ದವು ಎಂದರು.
ಆರ್ಥಿಕವಾಗಿ ದುರ್ಬಲರು, ಬಡವರಿಗಾಗಿ ಸರ್ಕಾರ ಸಪ್ತಪದಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಇಂಥ ಕಾರ್ಯಕ್ರಮಗಳು ಹೆಚ್ಚಾಗಲಿ:
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಬೆಲೆ ಏರಿಕೆ ಸಮಸ್ಯೆಯಿಂದ ಬಡವರು ಹಾಗೂ ಕೂಲಿಕಾರ್ಮಿಕರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರ ಇಂಥ ಕಾರ್ಯಕ್ರಮಗಳನ್ನು ಇನ್ನಷ್ಟು ಹಮ್ಮಿಕೊಳ್ಳಲಿ ಎಂದು ಹಾರೈಸಿದರು.
ಶಾಸಕ ಟಿ. ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿದರು.
ಎಡಿಸಿ ವಿಜಯಾ ಇ. ರವಿಕುಮಾರ್, ಉಪತಹಸೀಹಲ್ದಾರ್ ವೆಂಕಟೇಶಮೂರ್ತಿ, ಅರ್‌ಐ ಲಕ್ಷ್ಮಮ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು, ಮುಜರಾಯಿ ಇಲಾಖೆ ತಹಸೀಲ್ದಾರ್ ಹೇಮಾವತಿ, ಜಿಪಂ ಮಾಜಿ ಸದಸ್ಯ ಎಚ್. ಅಪ್ಪಯ್ಯಣ್ಣ, ಕಾಂಗ್ರೆಸ್ ಮುಖಂಡ ಶೆಟ್ಟಿಗೆರೆ ರಾಜಣ್ಣ, ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥಾಚಾರಿ, ರಾಜ್ಯ ತೆಂಗಿನ ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಪ್ರಧಾನ ಅರ್ಚಕ ಸುಬ್ಬಾಕೃಷ್ಣ ಶಾಸ್ತ್ರಿ ಮತ್ತಿತರರಿದ್ದರು.