ಸಾಮೂಹಿಕ ವಿವಾಹ ೧೧ರಂದು

ambedkar
Published on

ಕಲಬುರಗಿ: ಛಲವಾದಿ ಬುದ್ಧಿಸ್ಟ್​ ವಧು-ವರರ ಮಾಹಿತಿ ಸೇವಾ ಸಂದಿಂದ ಏ.೧೧ರಂದು ಮಧ್ಯಾಹ್ನ ೧೨.೪೫ಕ್ಕೆ ಆನಂದ ಬುದ್ಧ ವಿಹಾರದಲ್ಲಿ ಡಾ.ಅಂಬೇಡ್ಕರ್​ ಜಯಂತ್ಯುತ್ಸವ ಪ್ರಯುಕ್ತ ೧೩ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರಕಾಶ ತಿಳಿಸಿದರು.

ಇದುವರೆಗೆ ಸಂಘದಿಂದ ೬೪೮ ವಧು-ವರರನ್ನು ನೋಂದಾಯಿಸಿದ್ದು, ೧೬೦ ಮದುವೆ ಆಗಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವರಜ್ಯೋತಿ ಭಂತೆ ಸಾನ್ನಿಧ್ಯ ವಹಿಸಲಿದ್ದು, ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಲಿದ್ದಾರೆ. ಸಚಿವರಾದ ಪ್ರಿಯಾಂಕ್​ ರ‍್ಖಗೆ, ಡಾ.ಶರಣಪ್ರಕಾಶ ಪಾಟೀಲ್​, ಶಾಸಕ ಅಲ್ಲಮಪ್ರಭು ಪಾಟೀಲ್​, ಡಿಸಿ ೌಜಿಯಾ ತರನ್ನುಮ್​, ಸಮಾಜ ಕಲ್ಯಾಣ ಇಲಾಖೆ ಅಪರ ನರ‍್ದೇಶಕ ಅಲ್ಲಾಬ, ಡಾ.ಸುರೇಶ ಶಮಾರ್, ಡಾ.ಮಲ್ಲಿಕರ‍್ಜುನ ಮುಕ್ಕಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಶಿವಶಂಕರ ಪಟ್ಟಣ್ಣಕರ್​, ಕಾಳಪ್ಪ ಕೆಂಭಾವಿ, ಪರಮೇಶ್ವರ ಕೊರಳ್ಳಿ, ಚಂದ್ರಾಮ ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net