ಸಾಮೂಹಿಕ ವಿವಾಹ ಭಾಗ್ಯವಂತರದ್ದು

19-02kodekal04
Published on

ಕೊಡೇಕಲ್: ಸಾಮೂಹಿಕ ವಿವಾಹ ಎಂದರೆ ಅಸಡ್ಡೆ ಬೇಡ, ಇದು ಬಡವರ ಮದುವೆಯಲ್ಲ. ಭಾಗ್ಯವಂತರ ಮದುವೆಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ನುಡಿದರು.

ಶ್ರೀ ಗುರು ದುರುದುಂಡೇಶ್ವರ ವಿರಕ್ತಮಠದಲ್ಲಿ 21ನೇ ವರ್ಷದ ಕಾರ್ತಿಕೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿರುವ ಶ್ರೀ ಶಿವಕುಮಾರ ಸ್ವಾಮೀಜಿ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಪರೋಪಕಾರ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಶಾಸಕ ನರಸಿಂಹ ನಾಯಕ ಮಾತನಾಡಿ, 20 ವರ್ಷಗಳಿಂದ ಸರಳ ಸಾಮೂಹಿಕ ವಿವಾಹ ಆಯೋಜನೆ ಮಾಡುವ ಮೂಲಕ ಶ್ರೀಮಠವು ಸಗರ ನಾಡಿನಲ್ಲಿ ತನ್ನದೆಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ. ಶ್ರೀಮಠದ ಪ್ರತಿಯೊಂದು ಕಾರ್ಯಗಳಿಗೆ ನನ್ನ ಸಹಕಾರವಿದೆ ಎಂದರು.

ಶಾಸಕ ನರಸಿಂಹ ನಾಯಕ ಮತ್ತು ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ 16ಜೋಡಿ ವಧು-ವರರು ಹಸೆಮಣೆ ಏರಿದರು. ನಿಡಗುಂದಿ ಗ್ರಾಮದ ಶಿಕ್ಷಕ ಎನ್.ಆರ್.ಜಾಲಿಬೆಂಚಿ ಬರೆದ ಹಿಂಗಿತ್ತು ನನ್ನ ಬಾಲ್ಯ'ಹಿಂಗಾಯ್ತು ನನ್ನ ಜೀವನ' ಕೃತಿಯನ್ನು ಶ್ರೀಶೈಲ ಜಗದ್ಗುರುಗಳು ಬಿಡುಗಡೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ಸಾರೋಟನಲ್ಲಿ ವಾಧ್ಯಮೇಳ ಹಾಗೂ ಪೂರ್ಣ ಕುಂಭ-ಕಳಸದೊಂದಿಗೆ ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅದ್ದೂರಿ ಮೆರವಣಿಗೆ ನಡೆಯಿತು.

ಮಠದ ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ, ಬಸವಪೀಠ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ, ಗುಡಗುಂಟಿ ಸಂಸ್ಥಾನ ಶ್ರೀ ಅಭಿನವ ಗಜದಂಡ ಸ್ವಾಮೀಜಿ, ಗಡಿಗೌಡಗಾಂವನ ಶ್ರೀ ಹಾವಲಿಂಗೇಶ್ವರ ಮಠದ ಶ್ರೀ ಶಾಂತವೀರ ಶಿವಾಚಾರ್ಯರು, ಕರಡಕಲ್ನ ಶ್ರೀ ಶಾಂತರುದ್ರಮುನಿ ಸ್ವಾಮೀಜಿ, ಗುಳಬಾಳದ ಶ್ರೀ ಮರೀಹುಚ್ಚೇಶ್ವರ ಸ್ವಾಮೀಜಿ ಹಾಗೂ ರಾಜಾ ಜೀತೇಂದ್ರ ನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ಎಚ್.ಸಿ.ಪಾಟೀಲ್, ಡಾ.ಬಿ.ಎಂ.ಅಳ್ಳಿಕೋಟಿ, ಭೀಮನಗೌಡ ಮಾಲಿಪಾಟೀಲ್, ಸಂಗಣ್ಣ ವೈಲಿ, ಮಹದೇವ ಚಂದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net