ಸಾಮಾನ್ಯರಿಗೆ ಗಾಯದ ಮೇಲೆ ಬರೆ

1801Klb06
Published on

ಕಲಬುರಗಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರವು ದಿನ ಬಳಕೆಯ ವಸ್ತುಗಳ ಬೆಲೆ ಎರಿಕೆ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವದು ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೇದಾರಲಿಂಗಯ್ಯ ಹಿರೇಮಠ ಹೇಳಿದರು.
ಕೇಂದ್ರ ಹೊರಡಿಸಿದ 3 ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬುದು ಪಕ್ಷದ ಆಗ್ರಹವಾಗಿದೆ. 26 ರಂದು ನಡೆಯಲಿರುವ ರೈತ ಚಳವಳಿಗೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಶಾಮರಾವ್ ಸೂರನ್, ನಾಸೀರ ಹುಸೇನ್ ಉಸ್ತಾದ, ಅಲೀಮ್ ಇನಾಮದಾರ, ಮನೋಹರ ಪೋದ್ದಾರ, ಗುರುನಾಥ ಪೂಜಾರಿ, ಆನಂದ ಪಾಟೀಲ್, ಸುನೀಲ ಬಿರಾದಾರ, ಚಂದ್ರಶೇಖರ ಮಲ್ಲಾಬಾದ, ಶಂಕರ ಕಟ್ಟಿ ಸಂಗಾವಿ, ಅರವಿಂದ ರಂಜೇರಿ, ನಾಗಣ್ಣ ವಾರದ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net