ಸಾಮಾನ್ಯ ಪ್ರಜೆಗಳು ನಾಯಕರಾಗುವುದೇ ಸಂವಿಧಾನದ ಆಶಯ

6 ckm 8
ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ ಮಾಡಲಾಯಿತು. ಸಿ.ಟಿ.ರವಿ, ಎಂ.ಆರ್.ದೇವರಾಜಶೆಟ್ಟಿ, ಹಿರೇಮಗಳೂರು ಪುಟ್ಟಸ್ವಾಮಿ, ಕುರುವಂಗಿ ವೆಂಕಟೇಶ್, ಸೀತಾರಾಮಭರಣ್ಯ, ಎಚ್.ಕೆ.ಕೇಶವಮೂರ್ತಿ, ಡಾ.ನರೇಂದ್ರ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಷ್ಟçದ ಸಾಮಾನ್ಯ ಪ್ರಜೆಗಳು ನಾಯಕರಾಗಬೇಕು. ಸರ್ವರಿಗೂ ಸಮಪಾಲು, ಸಮಾನ ಅಧಿಕಾರ ತೊರೆಯಬೇಕೆಂಬ ಆಶಯದಿಂದ ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ಕಾನೂನು ರೂಪಿಸಿ ಮತದಾನದ ಹಕ್ಕನ್ನು ಒದಗಿಸಿಕೊಟ್ಟವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಅಂಬೇಡ್ಕರ್ ಬಹಳ ಕನಸನ್ನು ಹೊತ್ತು ಶೋಷಿತರು, ಅಸ್ಪÊಶ್ಯತೆಯ ವಿರುದ್ಧ ಹೋರಾಡಿ ಉಜ್ವಲ ಭವಿಷ್ಯಕ್ಕೆ ಇಡೀ ಜೀವನವನ್ನು ಮುಡಿಪಿಟ್ಟವರು. ಈ ನಡುವೆ ಸ್ವಾತಂತ್ರö್ಯ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ವಿರುದ್ಧ ಷಡ್ಯಂತ್ರ ರೂಪಿಸಿ ಸಂವಿಧಾನ ರಚನೆಗೆ ಅಡ್ಡಿಪಡಿಸುತ್ತಿದ್ದರು ಎಂದು ಹೇಳಿದರು.

ಸಂವಿಧಾನ ರಚನೆ ದಿನವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಕಾನೂನು ದಿನವೆಂದು ಘೋಷಿಸಿತು. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದAಥ ವೇಳೆಯಲ್ಲಿ ಕಾನೂನು ದಿನವನ್ನು ಸಂವಿಧಾನ ದಿನವೆಂದೇ ಘೋಷಿಸಿ ಅಂಬೇಡ್ಕರ್‌ಗೆ ಸಂಪೂರ್ಣ ಗೌರವ ಸೂಚಿಸುವ ಜೊತೆಗೆ ಅಂತಿಮ ಸಂಸ್ಕಾರಗೊAಡ ಸ್ಥಳವನ್ನು ಪಂಚಧಾಮಪೀಠವೆAದು ಅಭಿವೃದ್ಧಿಪಡಿಸಿದೆ ಎಂದರು.

ಜಾತಿ, ಧರ್ಮಗಳ ಪ್ರಭಾವಕ್ಕೆ ಒಳಗಾಗದೇ, ಎಲ್ಲಾ ಭಾರತೀಯರನ್ನು ಒಂದೇ ಸಮಾನರೆಂಬ ನೀತಿ ಅನುಸರಿಸುವ ಪ್ರಜೆಗಳನ್ನು ಸಮಾಜದ ಮುಂಚೂಣಿಗೆ ಕರೆತಂದು ಅಧಿಕಾರ ನೀಡುವುದೇ ಅಂಬೇಡ್ಕರ್ ಆಶಯವಾಗಿತ್ತು. ಆದರೆ ಇತ್ತೀಚೆಗೆ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿ ಆ ಜನಾಂಗವನ್ನೇ ತುಳಿಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.

ದೇಶದಲ್ಲಿ ಅಧಿಕಾರದ ಚುಕ್ಕಾಣಿ ಕೈತಪ್ಪಬಾರದೆಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ನೆಹರು ಕಾಲಘಟ್ಟದಿಂದ ವಂಶಪಾರAಪರ್ಯ ರಾಜಕಾರಣ ಕಾಂಗ್ರೆಸ್ ಮಾಡುತ್ತಿತ್ತು. ಇಂದಿರಾಗಾAಧಿ ನಂತರ ರಾಜಕೀಯ ಗಂಧವಿಲ್ಲದ ರಾಜೀವ್‌ಗಾಂಧಿಗೆ ಅಧಿಕಾರ. ಬಳಿಕ ಸೋನಿಯಾ ಗಾಂಧಿ ತಾಂತ್ರಿಕ ಕಾರಣದಿಂದ ಮನಮೋಹನ್‌ಸಿಂಗ್ ಅವರನ್ನು ಕೈಗೊಂಬೆ ಪ್ರಧಾನಿಯಾಗಿ ಕಾಂಗ್ರೆಸ್ ನೇಮಿಸಿತು ಎಂದು ಹೇಳಿದರು.

ಅಂಬೇಡ್ಕರ್ ತಮ್ಮ ಕೊನೇ ಗಳಿಗೆಯಲ್ಲಿ ಇಸ್ಲಾಂಗೆ ಮತಾಂತರಗೊAಡರೆ ಭಾರತೀಯ ಸಂಸ್ಕೃತಿಗೆ ಧಕ್ಕೆ ಯಾಗಲಿದೆೆ ಎಂದರಿತು ಬೌದ್ಧಧರ್ಮ ಆರಿಸಿಕೊಂಡರು. ಸಾವಿನ ಬಳಿಕವು ಅಂದಿನ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಅಂತಿಮ ಸಂಸ್ಕಾರಕ್ಕೂ ಅವಕಾಶ ನೀಡದೇ ಕಡಲತೀರದಲ್ಲಿ ಶವಸಂಸ್ಕಾರ ನಡೆಸಿರುವ ಹೀನಾ ಸಂಸ್ಕೃತಿ ಕಾಂಗ್ರೆಸ್ ಇತಿಹಾಸದಲ್ಲಿದೆ ಎಂದು ಟೀಕಿಸಿದರು.

ಭಾರತದ ನೆರೆ ರಾಷ್ಟçಗಳಲ್ಲಿ ಅಲ್ಪಸಂಖ್ಯಾತರಾದ ಸಿಖ್, ಕ್ರಿಶ್ಚಿಯರು, ಹಿಂದೂಗಳನ್ನು ಶೋಷಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಭಾರತವನ್ನು ವಿಶ್ವಮಾನ್ಯದಲ್ಲಿ ಕುಸಿಯದಂತೆ ಹಿಂದುತ್ವವನ್ನು ಉಳಿಸಬೇಕು. ರಾಷ್ಟç ವಿರೋಧಿ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಭಾರತವನ್ನು ಬಲಪಡಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಒಂದು ಜಾತಿಗೆ ಸೀಮಿತರಾಗಿ ದುಡಿಯದೇ ಸರ್ವರಿಗೂ ನ್ಯಾಯ ಒದಗಿಸುವಲ್ಲಿ ಸತತವಾಗಿ ಶ್ರಮಿಸಿವರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಅವರ ಮಾರ್ಗದಲ್ಲಿ ಎಲ್ಲರೂ ಒಂದಾಗಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಮಾಧ್ಯಮ್ ಪ್ರಮುಖ ಎಚ್.ಕೆ.ಕೇಶವಮೂರ್ತಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ನಗರ ಎಸ್ಸಿ ಮೋರ್ಚ ಜಗದೀಶ್, ಗ್ರಾಮಾಂತರ ಮೋರ್ಚಾದ ಪ್ರದೀಪ್‌ನಾಯ್ಕ್, ಆಲ್ದೂರು ಮೋರ್ಚಾದ ಮಂಜುನಾಥ್, ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ನಾಗೇಶ್, ಹಂಪಯ್ಯ, ಜೆ.ಡಿ.ಲೋಕೇಶ್, ರೇವನಾಥ್, ಗುರು, ರಘು, ಯತೀಶ್, ಈಶ್ವರಹಳ್ಳಿ ಮಹೇಶ್, ನಿರಂಜನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net