ಸಾಮಾಜಿಕ ಸೇವೆಯಿಂದ ಪ್ರಗತಿ

TKE I.W
ತರೀಕೆರೆಯಲ್ಲಿ ಏರ್ಪಡಿಸಿದ್ದ ಇನ್ನರ್‌ವ್ಹೀಲ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವನ್ನು ವಕೀಲೆ ಕೆ.ವಿನುತಾ ಉದ್ಘಾಟಿಸಿದರು. ಮೀರಾ, ಸುನೀತಾ, ಶ್ವೇತಾ, ಚಂದನಾ, ಉಮಾ, ಪ್ರತಿಭಾ ಇತರರಿದ್ದರು.
Published on

ತರೀಕೆರೆ: ಸಂಘ ಸಂಸ್ಥೆಗಳ ಸೇವೆ ಸಾಮಾಜಿಕವಾಗಿರಬೇಕು ಎಂದು ವಕೀಲೆ ಕೆ.ವಿನುತಾ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್‌ನ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ಇನ್ನರ್‌ವ್ಹೀಲ್ ಕ್ಲಬ್ ತರೀಕೆರೆ ಪಟ್ಟಣದಲ್ಲಿ 12 ವರ್ಷಗಳ ಹಿಂದೆ ಶಾಖೆ ಆರಂಭಿಸಿ ಉತ್ತಮ ಸೇವೆ ನೀಡುತ್ತಿದೆ. ಸಾರಥ್ಯ ವಹಿಸಿಕೊಳ್ಳುವ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.

ನೂತನ ಅಧ್ಯಕ್ಷೆ ಮೀರಾ ಅಧಿಕಾರ ಸ್ವೀಕರಿಸಿ ಮಾತನಾಡಿ, ಪರಿಸರ ರಕ್ಷಣೆಗೆ ಒತ್ತು ನೀಡಬೇಕಲ್ಲದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಬೇಕಿದೆ. ಈ ದಿಸೆಯಲ್ಲಿ ಪ್ರಯತ್ನ ನಿರಂತರಗೊಳಿಸಲಾಗುವುದು. ತಾಯಿ-ಮಗು ಆರೈಕೆಗೆ ಬೇಕಾದ ಕ್ರಮಗಳ ಜತೆ ಹಿರಿಯ ನಾಗರಿಕರಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ನೂತನ ಉಪಾಧ್ಯಕ್ಷೆ ಸುನೀತಾ, ಕಾರ್ಯದರ್ಶಿ ಶ್ವೇತಾ, ಖಜಾಂಚಿ ಚಂದನಾ, ಮಾಜಿ ಅಧ್ಯಕ್ಷರಾದ ಉಮಾ, ಪ್ರತಿಭಾ, ಮಂಜುಳಾ, ಸರ್ಕಾರಿ ಆಸ್ಪತ್ರೆ ವೈದ್ಯೆ ಸಿಂಧು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net